ಒಡಿಶಾ ಸರ್ಕಾರ : ಸರ್ಕಾರಿ ನೌಕರಿ ಆಗಲು 53ನೇ ವರ್ಷದವರೆಗೂ ಅವಕಾಶ
ಭುವನೇಶ್ವರ : ಒಡಿಶಾ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಸರ್ಕಾರಿ ನೌಕರಿಗೆ ಸೇರುವ ವಿವಿಧ ವರ್ಗಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿದೆ. ಕೆಲವು ವರ್ಗದ ಜನರಿಗೆ 53 ನೇ ವಯಸ್ಸಿನವರೆಗೂ ಒಡಿಶಾ ಅವಕಾಶ ಮಾಡಿಕೊಟ್ಟಿದೆ.
ಪರಿಶಿಷ್ಟ ಜಾತಿ, ಎಸ್ಸಿಬಿಸಿ ಸೇರಿದ ಅಂಗವಿಕಲರು ಗರಿಷ್ಠ 53ನೇ ವಯಸ್ಸಿನವರೆಗೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ಇನ್ನು ಗರಿಷ್ಠ ವಯೋ ಮಿತಿಯನ್ನು ಹೆಚ್ಚಿಸುವ ಮೂಲಕ ಮಧ್ಯ ವಯಸ್ಕರಿಗೆ ಉಪಯೋಗ ಮಾಡಿಕೊಟ್ಟಿದೆ. ಸಾಮಾನ್ಯ ವರ್ಗದವರ ಗರಿಷ್ಠ ವಯಸ್ಸನ್ನು 32ರಿಂದ 38ಕ್ಕೆ ಏರಿಸಿದೆ.
ಪರಿಶಿಷ್ಟ ಜಾತಿ, ಎಸ್ಸಿಬಿಸಿ ಅಭ್ಯರ್ತಿಗಳ ವಯೋ ಮಿತಿಯನ್ನು 43 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಈ ವಯೋಮಿತಿ 2021ರಲ್ಲಿ ಹೊರಡಿಸಲಾಗಿರುವ ಮತ್ತು 2022-23ರ ಅಧಿಸೂಚನೆಗೆ ಅನ್ವಯವಾಗಲಿದೆ.