ಜೀನ್ಸ್ ಧರಿಸಬೇಡ ಎಂದ ಗಂಡ; ಜೀವವನ್ನೇ ತೆಗೆದಳು ಹೆಂಡತಿ..!
ರಾಂಚಿ; ಇನ್ನು ನೀನು ಜೀನ್ಸ್ ಧರಿಸಬೇಡ ಎಂದು ಗಂಡ ತನ್ನ ಹೆಂಡತಿಗೆ ಹೇಳಿದ್ದಾನೆ. ಆದ್ರೆ, ಹೆಂಡತಿ ಜೀನ್ಸ್‌ಗಾಗಿ ಗಂಡನ ಪ್ರಾಣವನ್ನೇ ತೆಗೆದಿದ್ದಾಳೆ. ಹೌದು, ಜೀನ್ಸ್ ಧರಿಸೋ ವಿಚಾರವಾಗಿ ಗಂಡನ ಹೆಂಡತಿ ನಡುವೆ ಜಗಳ ನಡೆದಿದ್ದು, ಹೆಂಡತಿ ತನ್ನ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ಜಮ್ತಾರಾದಲ್ಲಿ ನಡೆದಿದೆ.
ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಪುಷ್ಪಾ ಹೆಂಬ್ರೋಮ್ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದ ಪುಷ್ಪಾಳನ್ನು ಜೀನ್ಸ್ ಧರಿಸಿದ್ದ ಬಗ್ಗೆ ಪತಿ ಪ್ರಶ್ನಿದ್ದಾರೆ ಹಾಗೂ ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ.
ನಂತರ ಜಗಳ ವಿಕೋಪಕ್ಕೆ ತಿರುಗಿ ಪುಷ್ಪಾ ತನ್ನ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕುಟುಂಬಸ್ಥರು ಧನ್‍ಬಾದ್‍ನಲ್ಲಿರು ಶಾಹಿದ್ ನಿರ್ಮಲ್ ಮಹತೋ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ.