National

ಮಾಲಿನ್ಯ ಉಂಟುಮಾಡುವ ಫಾರ್ಮಾ ಕಂಪನಿಗಳ ವಿರುದ್ಧ ಎನ್‌ಜಿಟಿ ಗರಂ

ಚನ್ನೈ: ಪರಿಸರವನ್ನು ಮಲಿನಗೊಳಿಸುವಂತಹ ಕಲ್ಮಶವನ್ನು ಹೊರಹಾಕದಂತೆ ಅದಕ್ಕೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸ ಮುಂದುವರೆಸಿರುವ ಫಾರ್ಮಾ ಕಂಪನಿಗಳಿಗೆ ಎನ್‌ಜಿಟಿ ಖಡಕ್‌ ಸಂದೇಶ ರವಾನಿಸಿದೆ.

ಫಾರ್ಮಾ ಕಂಪನಿಗಳಿಂದ ಉಂಟಾಗುವ ಮಾಲಿನ್ಯದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗಂಭೀರವಾಗಿ ತೆಗೆದುಕೊಂಡಿದೆ. ತೆಲಂಗಾಣದ ಗುಮ್ಮಿ ನರೇಂದ್ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ಎನ್‌ಜಿಟಿ ಪೀಠ ಇಂದು ವಿಚಾರಣೆ ನಡೆಸಿ ಕೂಡಲೇ ವರದಿ ನೀಡುವಂತೆ ಆದೇಶಿಸಿದೆ.

ದೂರುದಾರರ ಅರ್ಜಿಯಲ್ಲಿ ಮಾಲಿನ್ಯ ಉಂಟುಮಾಡುವ ಕಂಪನಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಜಿಟಿ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.

ಕಂಪನಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ.. ಈ ಮಾಲಿನ್ಯದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ರು.  ತೆಲಂಗಾಣ ಮಾಲಿನ್ಯ ನಿಯಂತ್ರಣ ಮಂಡಳಿ, ಯಾದಾದ್ರಿ ಭುವನೇಶ್ವರ ಜಿಲ್ಲಾಧಿಕಾರಿ ಮತ್ತು ಕೃಷಿ ಆಯುಕ್ತರಿಗೆ ಈ ವಿಷಯದ ಕುರಿತು ನ್ಯಾಯಮೂರ್ತಿ ಕೆ ರಾಮಕೃಷ್ಣ ಮತ್ತು ತಜ್ಞ ಸದಸ್ಯ ಕೆ ಸತ್ಯಗೋಪಾಲ್ ಅವರನ್ನೊಳಗೊಂಡ ಚೆನ್ನೈ-ಎನ್‌ಜಿಟಿ ಪೀಠ ನಿರ್ದೇಶನಗಳನ್ನು ನೀಡಿದೆ.

ಈ ಕುರಿತು ಅರ್ಜಿಯ ಮುಂದಿನ ವಿಚಾರಣೆಯನ್ನು ಮಾರ್ಚ್ 3ಕ್ಕೆ ಎನ್‌ಜಿಟಿ ನ್ಯಾಯಾಲಯ ಮುಂದೂಡಿದೆ.

Share Post