Bengaluru

ಹರ್ಷ ಕೊಲೆ ಹಿಂದೆ ಅನೇಕ ಶಕ್ತಿಗಳ ಅಡಗಿವೆ; ಆರಗ ಜ್ಞಾನೇಂದ್ರ

ಬೆಂಗಳೂರು: ಹಿಜಾಬ್‌ ವಿಚಾರ ಶುರುವಾದ ಮೇಲೆ ನಮಗೆ ಡೌಟಿತ್ತು. ಅನೇಕ ಶಕ್ತಿಗಳು ಈ ಕೊಲೆ ಹಿಂದೆ ಇವೆ ಎಂಬ ಮಾಹಿತಿ ಇದೆ. ಈಗಾಗಲೇ ಹರ್ಷ ಕೊಲೆ ಸಂಬಂಧ ಮೂವರನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನೂ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನ್ಯೂಸ್‌ ಎಕ್ಸ್‌ ಎಕ್ಸಿಕ್ಯೂಟಿವ್ ಎಡಿಟರ್‌ ಆರ್‌.ಜಯಪ್ರಕಾಶ್‌ ನಡೆಸಿದ ಕಿರುಸಂದರ್ಶನದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡಬೇಕೆಂಬ ಷಡ್ಯಂತ್ರ ನಡೆಯುತ್ತಿದೆ. ಈಶ್ವರಪ್ಪ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಅವರ ಇದ್ದಾಗ ಒಂದು ಸಣ್ಣ ಗಲಾಟೆಯೂ ನಡೆಯಲಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಇದೇ ವೇಳೆ ಸಮಜಾಯಿಷಿ ನೀಡಿದ್ದಾರೆ.

ಹರ್ಷ ಕೊಲೆ ನಂತರ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಮೆರವಣಿಗೆ ಈಶ್ವರಪ್ಪ ಅವರು ಪಾಲ್ಗೊಂಡಿದ್ದರು. ಈ ವೇಳೆ ನಡೆದ ಕಲ್ಲುತೂರಾಟದ ಬಗ್ಗೆ ಕಾಂಗ್ರೆಸ್‌ ಕಿಡಿಕಾರುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಈಶ್ವರಪ್ಪ ಅವರು ಅಶಾಂತಿಗೆ ಯಾವುದೇ ಅವಕಾಶ ಕೊಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಹರ್ಷ ಮನೆಯ ಬಳಿ ಸೇರಿದ್ದ ಎಲ್ಲರಿಗೂ ಶಾಂತಿ ಕಾಪಾಡುವಂತೆ ಕೋರಿದ್ದಾರೆ. ಅವರು ಅಲ್ಲಿರುವವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈಶ್ವರಪ್ಪ ಎದುರಲ್ಲಿ ಒಂದು ಸಣ್ಣ ಗಲಾಟೆಯೂ ಆಗಿಲ್ಲ. ಸುಮ್ಮನೆ ಅವರ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ಹಿಜಾಬ್‌ ವಿಚಾರವಾಗಿ ಮಾತನಾಡಿದ ಅವರು, ಯಾವು ವಿದ್ಯಾರ್ಥಿಯೂ ಇದಕ್ಕೆ ಹೊಣೆಗಾರರಲ್ಲ. ವಿದ್ಯಾರ್ಥಿಗಳಲ್ಲಿ ಮತೀಯ ವಿಷಬೀಜ ಬಿತ್ತಿ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ ಎಂದರು.

Share Post