CrimeNational

ನಿನ್ನೆ 11 ಗಂಟೆ ರಾಹುಲ್‌ ಸುದೀರ್ಘ ವಿಚಾರಣೆ; ಇವತ್ತೂ ಇದೆ ವಿಚಾರಣೆ

ನವದೆಹಲಿ; ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧ ನಿನ್ನೆ ಸುದೀರ್ಘ ವಿಚಾರಣೆ ಎದುರಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇವತ್ತೂ ಕೂಡಾ ವಿಚಾರಣೆಗೆ ಹಾಜರಾಗಬೇಕಿದೆ. ಜಾರಿ ನಿರ್ದೇಶನಾಲಯದ ಸೂಚನೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಇವತ್ತೂ ಕೂಡಾ ವಿಚಾರಣೆಗೆ ಹಾಜರಾಗಲಿದ್ದಾರೆ.

ನಿನ್ನೆ ಪಾದಯಾತ್ರೆ ಮೂಲಕ ಬಂದು ರಾಹುಲ್‌ ಗಾಂಧಿ ವಿಚಾರಣೆ ಎದುರಿಸಿದ್ದರು. ಮೊದಲಿಗೆ ಮೂರು ಗಂಟೆ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಂತರ ಊಟದ ವಿರಾಮ ನೀಡಿದ್ದರು. ಅನಂತರ ಸತತ ಎಂಟು ಗಂಟೆಗಳ ಕಾಲ ರಾಹುಲ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. ಅಂದರೆ ನಿನ್ನೆ ಒಟ್ಟು 11 ಗಂಟೆಗಳ ಕಾಲ ರಾಹುಲ್‌ರ ವಿಚಾರಣೆ ಮಾಡಲಾಗಿದೆ.

ಇನ್ನು ಇಂದು ಹನ್ನೊಂದು ಗಂಟೆಗೆ ವಿಚಾರಣೆಗೆ ಬರುವಂತೆ ರಾಹುಲ್‌ ಗಾಂಧಿಗೆ ಸೂಚಿಸಲಾಗಿದೆ. ನಿನ್ನೆ ರಾಹುಲ್‌ಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಆದ್ರೆ ಯಾವುದೇ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಇಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಹಲವು ಪ್ರಶ್ನೆಗಳಿಗೆ ಪಕ್ಷದ ಹಿರಿಯ ನಾಯಕರು ಹಾಗೂ ಸಂಬಂಧಿಸಿದ ಸಿಬ್ಬಂದಿ ಕೇಳಿ ಉತ್ತರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಉತ್ತರದಿಂದ ಸಮಾಧಾನ ಆಗದ ಇಡಿ ಅಧಿಕಾರಿಗಳು ಇಂದು ದಾಖಲೆಗಳ ಸಹಿತ ವಿಚಾರಣೆಗೆ ಬನ್ನಿ ಎಂದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

Share Post