CrimeNational

ಮಹಿಳೆಯರ ಬೆತ್ತಲೆ ಮೆರವಣಿಗೆ; ಭತ್ತದ ಗದ್ದೆಯಲ್ಲಿ ಸಾಮೂಹಿಕ ಅತ್ಯಾಚಾರ

ಇಂಫಾಲ; ಮಣಿಪುರದಲ್ಲಿ ಮೀಸಲಾತಿ ಸಂಬಂಧ ಎರಡು ಬುಡಕಟ್ಟು ಜನಾಂಗಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಆಡಳಿತ ಪಕ್ಷಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮಣಿಪುರದಲ್ಲಿ ಭೀಬತ್ಸ ಘಟನೆಗಳು ನಡೆಯುತ್ತಿವೆ. ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ಇಲ್ಲಿ ನಡೆದಿದ್ದು, ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿದ್ದು, ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ.

ಮೇ 4ರಂದು ಈ ಕೃತ್ಯ ಎಸಗಲಾಗಿದ್ದು, ಇದರ ವಿಡಿಯೋ ಈಗ ವೈರಲ್‌ ಆಗಿದೆ. ಇದಕ್ಕೆ ದೇಶಾದ್ಯಂತ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಗಳು ಕೇಳಿಬರುತ್ತಿವೆ. ಮಾಹಿತಿ ಪ್ರಕಾರ ಇಂಫಾಲದಿಂದ 35 ಕಿಲೋ ಮೀಟರ್‌ ದೂರದ ಕಾಂಗ್‌ ಪೋಕ್ಷಿ ಜಿಲ್ಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ. ನೂರಾರು ಯುವಕರು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಯುವಕರು ಆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಬಲವಂತವಾಗಿ ಇಬ್ಬರು ಮಹಿಳೆಯನ್ನು ಭತ್ತದ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ಮೈತೇಯಿ ಹಾಗೂ ಕುಕಿ ಬುಡಕಟ್ಟು ಸಮುದಾಯಗಳು ಹೊಡೆದಾಡಿಕೊಳ್ಳುತ್ತಿವೆ. ಕಳೆದ ಕೆಲ ತಿಂಗಳಿಂದ ಹಿಂಸಾಚಾರಗಳು ನಡೆಯುತ್ತಿದೆ. ಇದರಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಆದರೂ ಕೂಡಾ ಆಳುತ್ತಿರುವ ಸರ್ಕಾರಗಳು ಸೂಕ್ತವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಇದರ ನಡುವೆ ಇಂತಹ ಪೈಶಾಚಿಕ ಕೃತ್ಯ ಎಸಗಲಾಗಿದೆ. ಈ ಕೃತ್ಯ ಎಸಗಿ ಎರಡೂವರೆ ತಿಂಗಳಾದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ವಿಡಿಯೋ ವೈರಲ್‌ ಆದ ಮೇಲೆ ಪೊಲೀಸರು ಕೇವಲ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹಿಳೆಯರು ಕುಕಿ ಸಮುದಾಯಕ್ಕೆ ಸೇರಿದ್ದು, ಮೈತೇಯಿ ಸಮುದಾಯದ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

 

Share Post