CrimeNational

ಮುಂಬೈ ದಾಳಿ ರೀತಿ ಮತ್ತೊಂದು ದಾಳಿ; ಪೊಲೀಸರಿಗೆ ಬಂತು ಬೆದರಿಕೆ ಸಂದೇಶ

ಮುಂಬೈ; 26/11ರ ಮುಂಬೈ ದಾಳಿ ರೀತಿಯಲ್ಲೇ ಮತ್ತೊಂದು ದಾಳಿ ನಡೆಸುವುದಾಗಿ ಮುಂಬೈನ ಟ್ರಾಫಿಕ್ ಪೊಲೀಸ್ ಸಹಾಯವಾಣಿಯ ವಾಟ್ಸಾಪ್ ಸಂಖ್ಯೆಗೆ ಕಳೆದ ರಾತ್ರಿ ಬೆದರಿಕೆ ಸಂದೇಶಗಳು ಬಂದಿವೆ. ವಾಟ್ಸಾಪ್‌ ಮೂಲಕ ಹಲವು ಸಂದೇಶಗಳು ರವಾನೆಯಾಗಿದ್ದು, ಹೊರದೇಶದಲ್ಲಿ ಕುಳಿತು ಸಂದೇಶ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸೆಂಟ್ರಲ್ ಮುಂಬೈನ ವರ್ಲಿಯಲ್ಲಿರುವ ಕಂಟ್ರೋಲ್ ರೂಮ್‌ನ ಟ್ರಾಫಿಕ್‌ ಸಹಾಯವಾಣಿ ಸಂಖ್ಯೆಗೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಹಲವು ಸಂದೇಶಗಳು ಬಂದಿವೆ. 26/11ರ ಮುಂಬೈ ದಾಳಿ ಮಾದರಿಯಲ್ಲಿ ದಾಳಿ ನಡೆಸುವುದಾಗಿ ಸಂದೇಶದಲ್ಲಿ ಹೇಳಲಾಗಿದೆ ಎಂದು ಪೊಲೀಸರು ಹೇಳಿದರು. ನಗರ ಅಪರಾಧ ವಿಭಾಗವು ಈ ಬಗ್ಗೆ ತನಿಖೆ ಪ್ರಾರಂಭಿಸಿದೆ. 2008 ನವೆಂಬರ್ 26ರಂದು ಮುಂಬೈನಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಪಾಕಿಸ್ತಾನದ 10 ಶಸ್ತ್ರಸಜ್ಜಿತ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ್ದರು. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್‌ನಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಗಿದ್ಗಿ ಅನುಮಾನಾಸ್ಪದ ದೋನಿಯಲ್ಲಿ 3 ಎಕೆ–47 ರೈಫಲ್, ಬುಲೆಟ್‌ಗಳು ಸಿಕ್ಕಿದ್ದವು. ಮುಂಬೈನಿಂದ 190 ಕಿ.ಮೀ ದೂರದ ಶ್ರೀವರ್ಧನ್ ಪ್ರದೇಶದಲ್ಲಿ ಯಾರೂ ಇಲ್ಲದ ಹಡಗನ್ನು ಕಂಡ ಸ್ಥಳೀಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

Share Post