National

ಭಾರತದ ಅಟಾರ್ನಿ ಜನರಲ್‌ ಆಗಿ ಮುಕುಲ್‌ ರೊಹಟಗಿ ನೇಮಕ

ನವದೆಹಲಿ; ಮುಕುಲ್ ರೋಹಟಗಿ ಅವರನ್ನು ಭಾರತದ ಅಟಾರ್ನಿ ಜನರಲ್‌ ನೇಮಿಸಲಾಗಿದೆ. ಅಕ್ಟೋಬರ್ 1 ರಿಂದ ಅವರು ಕಾರ್ಯನಿರ್ವಹಿಸಲಿದ್ದಾರೆ. ಕೆ.ಕೆ ವೇಣುಗೋಪಾಲ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ತುಂಬಲಿದ್ದಾರೆ.

ರೋಹಟಗಿ ಅವರು 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕವಾಗಿ 2017 ರವರೆಗೆ ಸೇವೆ ಸಲ್ಲಿಸಿದ್ದರು. ಈಗ ಎರಡನೇ ಬಾರಿಗೆ ಅವರು ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ.

ಮುಕುಲ್ ರೋಹಟಗಿ ಅವರು ಅಕ್ಟೋಬರ್ 1, 2022 ರಿಂದ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ವೇಣುಗೋಪಾಲ್ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್ 30 ರ ನಂತರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದರು.

ವೇಣುಗೋಪಾಲ್ ಅವರ ಅಧಿಕಾರಾವಧಿಯನ್ನು ಈ ವರ್ಷದ ಜೂನ್ ಅಂತ್ಯದಲ್ಲಿ ಮೂರು ತಿಂಗಳು ವಿಸ್ತರಿಸಲಾಗಿತ್ತು.

Share Post