National

ಶಾಲೆಯಲ್ಲಿ ಒಳ್ಳೆ ಹಾಗೂ ಕೆಟ್ಟ ಸ್ಪರ್ಶದ ಪಾಠ; ತಂದೆಯ ಪೈಶಾಚಿಕತೆ ಬಿಚ್ಚಿಟ್ಟ ಬಾಲಕಿ

ಪುಣೆ: ಬಾಲಕಿ ಮೇಲೆ ತಂದೆ ಹಾಗೂ ಸಹೋದರನೇ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಆರೋಪಿಗಳಿಗೆ ಸಂತ್ರಸ್ತೆಯ ತಾತ ಮತ್ತು ದೂರದ ಸಂಬಂಧಿಯೊಬ್ಬ ಕೂಡಾ ಕಿರುಕುಳ ನೀಡುತ್ತಿದ್ದರು. ಕಳೆದ ಐದು ವರ್ಷಗಳಿಂದಲೂ ಬಾಲಕಿ ಮೇಲೆ ಅಪರಾಧ ಎಸಗಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಮತ್ತು ಕಿರುಕುಳಕ್ಕೆ ಸಂಬಂಧಿಸಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋದರ ಮತ್ತು ತಂದೆಯ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ಆಕೆಯ 60 ವರ್ಷದ ತಾತ ಮತ್ತು ಚಿಕ್ಕಪ್ಪನ ಮೇಲೆ ಕಿರುಕುಳದ ಪ್ರಕರಣ ದಾಖಲಾಗಿದೆ. ಸದ್ಯ ಬಾಲಕಿಯು ಪುಣೆಯ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿದ್ದಾಳೆ. ಬಿಹಾರದಿಂದ ಬಂದಿದ್ದ ಬಾಲಕಿ ಮತ್ತು ಆಕೆಯ ಕುಟುಂಬದವರು ಸದ್ಯ ಪುಣೆಯಲ್ಲಿ ನೆಲೆಸಿದ್ದಾರೆ.

ಶಾಲೆಯಲ್ಲಿ ‘ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ದ ಕುರಿತಾಗಿ ಸೆಷನ್ ನಡೆಸುವ ವೇಳೆ ಈ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಕಳೆದ 5 ವರ್ಷಗಳಿಂದಲೂ ಇದೇ ನಡೆಯುತ್ತಿದ್ದುದಾಗಿ ತಿಳಿಸಿದ್ದಾಳೆ. ಬಿಹಾರದಲ್ಲಿ ವಾಸಿಸುತ್ತಿದ್ದಾಗ 2017ರಿಂದ ತಂದೆಯು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಬಾಲಕಿಯ ಸೋದರ 2020 ರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆಕೆಯ ತಾತ ಮತ್ತು ಚಿಕ್ಕಪ್ಪ ಕೂಡ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಿನಿ ಸತ್ಪುಟೇ ತಿಳಿಸಿದ್ದಾರೆ.

Share Post