National

ಮಹಾ ರಾಜಕೀಯ ಬಿಕ್ಕಟ್ಟು; ಏಕನಾಥ್‌ ಶಿಂಧೆ ಬಳಿ 51 ಶಾಸಕರು..!

ಮುಂಬೈ; ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುವುದು ಬಹುತೇಕ ಖಚಿತವಾಗಿದೆ. ಬಂಡೆದ್ದಿರುವ ಏಕನಾತ್‌ ಶಿಂಧೆ ಅವರ ಜೊತೆ ಒಟ್ಟು 51 ಶಾಸಕರಿದ್ದಾರೆ ಎಂದು ತಿಳಿದುಬಂದಿದೆ. ಅವರೆಲ್ಲರೂ ಗುವಾಹಟಿಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಎಲ್ಲರೂ ಸೇರಿ ರಾಜ್ಯಪಾಲರನ್ನು ಭೇಟಿ ಮಾಡಿ ಪೆರೇಡ್‌ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

ಏನಕಾಥ್‌ ಶಿಂಧೆ ಅವರ ಜೊತೆ ಶಿವಸೇನೆಯ 39 ಶಾಸಕರು ಹಾಗೂ 12 ಸ್ವತಂತ್ರ ಶಾಸಕರು ಇದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಒಟ್ಟು 287 ಶಾಸಕರಿದ್ದಾರೆ. ಬಹುಮತಕ್ಕೆ 144 ಶಾಸಕರ ಅಗತ್ಯವಿದೆ. ಬಿಜೆಪಿ ಪಕ್ಷ 113 ಶಾಸಕರನ್ನು ಹೊಂದಿದೆ. 106 ಶಾಸಕರು ಮತ್ತು ಪಕ್ಷೇತರು ಸೇರಿದಂತೆ ಬಿಜೆಪಿಯ ಒಟ್ಟು ಬಲ 113 ಆಗಿದೆ. ಏಕನಾಥ್ ಶಿಂಧೆ ಅವರ ಜೊತೆ 51 ಶಾಸಕರಿದ್ದಾರೆ. ಹೀಗಾಗಿ ಏಕನಾಥ್‌ ಶಿಂಧೆ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

ಇನ್ನು ಶಿವಸೇನೆಯ 37 ಶಾಸಕರು ಅಥವಾ ಅದಕ್ಕಿಂತ ಹೆಚ್ಚು ಶಾಸಕರು ಬಂಡಾಯವೆದ್ದರೆ, ಪಕ್ಷದ ಪಕ್ಷದ ಶಾಸಕರ ಒಟ್ಟು ಬಲದ ಮೂರನೇ ಎರಡರಷ್ಟು ಶಾಸಕರು ಬಂಡಾಯವೆದ್ದರೆ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ಏಕನಾತ್‌ ಶಿಂಧೆ ಪರವಾಗಿ ಈಗ 39 ಶಾಸಕರಿದ್ದಾರೆ. ಹೀಗಾಗಿ ಅವರು ಯಾವ ನಿರ್ಣಯ ಕೈಗೊಂಡರೂ, ಆ ಶಾಸಕರಿಗೆ ಯಾವುದೇ ತೊಂದರೆಯಾಗುವುದಿಲ್ಲ.

Share Post