ವಿಚ್ಛೇದನ ಕೋರಿದ್ದ ಹೆಂಡತಿ ಮೇಲೆ ಆಸಿಡ್ ದಾಳಿ!
ಮುಂಬೈ; ಪ್ರೀತಿಸಿ ಮದುವೆಯಾಗಿದ್ದ ಗಂಡ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಹೆಂಡತಿಗೆ ಗೊತ್ತಾಗಿದೆ.. ಇದರಿಂದ ಆಕ್ರೋಶಗೊಂಡ ಆಕೆ ಗಂಡನ ಜೊತೆ ಜಗಳವಾಡಿ ತಾಯಿ ಮನೆಗೆ ಸೇರಿದ್ದಾಳೆ.. ಗಂಡನಿಂದ ವಿಚ್ಛೇದನ ಕೂಡಾ ಕೇಳಿದ್ದಾಳೆ.. ಇದರಿಂದ ಆಕ್ರೋಶಗೊಂಡ ಗಂಡ, ತವರು ಮನೆಯಲ್ಲಿದ್ದ ಹೆಂಡತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ..
ಮುಂಬೈನ ಮಲಾಡ್‌ನಲ್ಲಿ ಈ ಘಟನೆ ನಡೆದಿದೆ.. 2019ರಲ್ಲಿ 27 ವರ್ಷದ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಳು.. ಆದ್ರೆ ಗಂಡನ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಹೆಂಡತಿಗೆ ಗೊತ್ತಾಗಿದೆ.. ಈ ಬಗ್ಗೆ ಹಲವಾರು ಬಾರಿ ಜಗಳಗಳು ನಡೆದಿದ್ದು, ಕೊನೆಗೆ ಹೆಂಡತಿ ತವರು ಮನೆ ಸೇರಿದ್ದಾಳೆ.. ಗಂಡನಿಗೆ ಕೆಲಸವಿಲ್ಲ, ಜೊತೆಗೆ ಮಾದಕವ್ಯಸಗಿಯೂ ಆಗಿದ್ದಾನೆ.. ಈ ಕಾರಣದಿಂದ ಆಕೆ ವಿಚ್ಛೇದನ ಕೋರಿದ್ದಾಳೆ..
ಇದರಿಂದ ಕುಪಿತಗೊಂಡ ಆರೋಪಿ, ಹೆಂಡತಿಯ ತವರು ಮನೆಗೆ ಹೋಗಿದ್ದಾನೆ.. ಅಲ್ಲಿ ಹೆಂಡತಿ ಜೊತೆ ಜಗಳವಾಡಿದ್ದಾನೆ.. ಇದೇ ವೇಳೆ ಆಕೆ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 124 (2) (ಹಾನಿ ಮಾಡುವ ಉದ್ದೇಶದಿಂದ ವ್ಯಕ್ತಿಯ ಮೇಲೆ ಆ್ಯಸಿಡ್ ಎರಚುವುದು), 311 (ಗಾಯ ಅಥವಾ ಕೊಲೆ ಪ್ರಯತ್ನ) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..