National

ಮಧ್ಯಪ್ರದೇಶ : ಮನೆಯಲ್ಲೇ ಬಾರ್‌ಗೆ ಸರ್ಕಾರ ಅನುಮತಿ ಕೊಟ್ಟಿದೆ

ಭೋಪಾಲ್‌ : ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಮಧ್ಯಪ್ರದೇಶ ಸರ್ಕಾರ. ನೂತನ ಅಬಕಾರಿ ನೀತಿ 2022-23ಕ್ಕೆ ಮಧ್ಯಪ್ರದೇಶ ಸರ್ಕಾರ ಅನುಮೋದನೆ ನೀಡಿದೆ. ಮದ್ಯದ ದರದಲ್ಲಿ ಭಾರಿ ಇಳಿಕೆ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮದ್ಯದೆದಲ್ಲಿ ಶೇ.20ರಷ್ಟು ಇಳಿಕೆ ಮಾಡಲಿದೆ.

ಮನೆಯಲ್ಲಿಯೇ ಮಿನಿ ಬಾರ್‌ ಅನ್ನು ಹೊಂದಲು ಸರ್ಕಾರ ಅನುಮತಿ ನೀಡಿದೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಳಿಗೆ ಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಸರ್ಕಾರ ನಿರ್ಧರಿಸಿದೆ.

ವರ್ಷಕ್ಕೆ 1ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ವರ್ಷಕ್ಕೆ 50000 ಶುಲ್ಕ ಪಾವತಿಸಿ ಬಾರ್‌ ಲೈಸೆನ್ಸ್‌ ಪಡೆಯಬಹುದಾಗಿದೆ.

Share Post