National

ಹೆದ್ದಾರಿಗಳಲ್ಲಿ ಭಾರಿ ಹಿಮಪಾತ; ಯಂತ್ರಗಳ ಮೂಲಕ ಹಿಮ ತೆರವು

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಇಂದೂ ಕೂಡಾ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಹೆದ್ದಾರಿಗಳಲ್ಲೆಲ್ಲಾ ಅಡಿಗಟ್ಟಲೆ ಹಿಮ ಶೇಖರಣೆಯಾಗಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಯಂತ್ರಗಳನ್ನು ಬಳಸಿ ಹಿಮವನ್ನು ಪಕ್ಕಕ್ಕೆ ಸರಿಸಲಾಯಿತು.

ಕಳೆದ ಕೆಲ ದನಗಳಿಂದ ಜಮ್ಮು-ಕಾಶ್ಮೀರದಲ್ಲಿ ಹಿಮಪಾತ ಜಾಸ್ತಿಯಾಗುತ್ತಿದೆ. ಎಲ್ಲೆಲ್ಲೂ ಹಿಮ ಶೇಖರಣೆಯಾಗುತ್ತಿದೆ. ಅದ್ರಲ್ಲೂ ರಸ್ತೆಗಳಲ್ಲಿ ಹಿಮ ಶೇಖರಣೆಯಾಗಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ, ರಸ್ತೆಗಳಲ್ಲಿ ಶೇಖರಣೆಯಾಗಿದ್ದ ಹಿಮವನ್ನು ಪಕ್ಕಕ್ಕೆ ಸರಿಸಲು ಕಾರ್ಮಿಕರು ಹಾಗೂ ವಿಶೇಷ ಯಂತ್ರಗಳನ್ನು ಬಳಸುತ್ತಿದೆ. ಆ ಯಂತ್ರಗಳ ಮೂಲಕ ರಸ್ತೆಗಳಲ್ಲಿದ್ದ ಭಾರಿ ಪ್ರಮಾಣದ ಹಿಮವನ್ನು ಖಾಲಿ ಮಾಡಲಾಗುತ್ತಿದೆ.

Share Post