National

ಮೆಟ್ಟಿಲ ಮೇಲೆ ಜಾರಿಬಿದ್ದ ಲಾಲು ಪ್ರಸಾದ್‌ ಯಾದವ್‌; ಮುರಿದ ಭುಜ, ಬೆನ್ನಿಗೆ ಗಾಯ

ಪಾಟ್ನಾ; ಆರ್‌ಜೆಡಿ ಪಕ್ಷದ ಸಂಸ್ಥಾಪಕ ಲಾಲೂ ಪ್ರಸಾದ್‌ ಯಾದವ್‌ ಅವರು ತಮ್ಮ ಮನೆಯಲ್ಲಿ ಜಾರಿಬಿದ್ದಿದ್ದಾರೆ. ಮೆಟ್ಟಿಲುಗಳ ಮೇಲೆ ಅವರು ಜಾರಿ ಬಿದ್ದಿದ್ದು, ಅವರ ಭುಜದ ಭಾಗದಲ್ಲಿ ಮೂಳೆ ಮುರಿದಿದೆ. ಬೆನ್ನಿಗೂ ಕೂಡಾ ಗಾಯಗಳಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಾಲೂ ಪ್ರಸಾದ್‌ ಯಾದವ್‌ ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅವರು ಸಿದ್ಧತೆ ನಡೆಸಿದ್ದರು. ಈ ನಡುವೆ ಈ ಅವಘಡ ಸಂಭವಿಸಿದೆ ಲಾಲೂ ಅವರ ಭುಜದಲ್ಲಿ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಭುಜ ಹೊಂದಿಕೊಳ್ಳಲೆಂದು ಅವರಿಗೆ ಕಟ್ಟು ಹಾಕಲಾಗಿದೆ. ಕೆಲ ಔಷಧಿಗಳನ್ನು ನೀಡಿ ಮರಳಿ ಮನೆಗೆ ಕಳುಹಿಸಲಾಗಿದೆ.

ಮೇವು ಹಗರಣದ ಹಲವು ಪ್ರಕರಣಗಳಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಅವರು ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

Share Post