National

ಯೋಗಿ ಆದಿತ್ಯನಾಥ್‌ರನ್ನು ಮಹಾರಾಜ್‌ ಎಂದ ನಟಿ ಕಂಗನಾ

ಲಖನೌ: ಬಾಲಿವುಡ್ ನಟಿ ಕಂಗನಾ ರನೌತ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್‌ ಅವರನ್ನು ಮಹಾರಾಜ್‌ ಎಂದು ಕರೆದಿದ್ದಾರೆ. ನಿನ್ನೆ ಸಂಜೆ ಅವರು ಲಖನೌನಲ್ಲಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿದ್ದರು. ಅನಂತರ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದು, ಅದ್ರಲ್ಲಿ ಯೋಗಿ ಮಹಾರಾಜ್‌ ಅವರನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಯೋಗಿ ಮಹಾರಾಜ್ ಅವರನ್ನು ಇಂದು ಭೇಟಿಯಾಗುವ ಸುವರ್ಣಾವಕಾಶ ಒದಗಿ ಬಂದಿತ್ತು. ಇದೊಂದು ಅದ್ಭುತ ಭೇಟಿಯಾಗಿತ್ತು. ಯೋಗಿ ಅವರಿಗೆ ಯೋಗಿ ಅವರೇ ಸಾಟಿ. ಅವರೊಂದಿಗೆ ಕೆಲಹೊತ್ತು ಮಾತುಕತೆಯಾಡಿದ್ದು, ಅವರ ಮಾತುಗಳಿಗೆ ನಾನು ಮೂಕವಿಸ್ಮಿತಳಾದೆ ಎಂದು ಅವರು ಹೇಳಿಕೊಂಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಯೋಗಿ ಅವರು ಸತತ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗನಾ ಅವರು ಯೋಗಿ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ.

Share Post