CrimeNational

ಸ್ವಾತಂತ್ರ್ಯೋತ್ಸವದ ಮೇಲೆ ಉಗ್ರರ ಕಣ್ಣು; ಶ್ರೀನಗರದಲ್ಲಿ 30 ಕೆಜಿ ಸುಧಾರಿತ ಸ್ಫೋಟಕ ಪತ್ತೆ..!

ಶ್ರೀನಗರ; ಸ್ವಾತಂತ್ರ ದಿನಾಚರಣೆ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಪುಲ್ವಾಮಾದಲ್ಲಿ ಸುಧಾರಿತ ಸ್ಫೋಟಕವೊಂದನ್ನು ಪೊಲೀಸರು ಹಾಗೂ ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು, ಮುಂದೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕ (ಐಇಡಿ) ಪತ್ತೆಯಾಗಿದೆ. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು, ಮುಂದಾಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಈ ಮಧ್ಯೆ, ಬುದ್ಗಾಮ್‌ನ ವಾಟರ್‌ಹೈಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದೆ. ಇತ್ತ, ಕಾಶ್ಮೀರಿ ಪಂಡಿತರಾದ ರಾಹುಲ್ ಭಟ್ ಮತ್ತು ಅಮರೀನ್ ಭಟ್ ಸೇರಿದಂತೆ ಹಲವಾರು ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಲತೀಫ್ ರಾಥರ್ ಸೇರಿದಂತೆ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾಗೆ ಸೇರಿದ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ.

Share Post