National

ಯುವಕನ ಲಾಕಪ್‌ ಡೆತ್‌; ರೊಚ್ಚಿಗೆದ್ದ ಜನರಿಂದ ಎಎಸ್‌ಐ ಹತ್ಯೆ

ಬೆಟ್ಟಿಯಾ: ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇದರಿಂದ ರೊಚ್ಚಿಗೆದ್ದ ಜನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಒಬ್ಬರನ್ನು ಹತ್ಯೆ ಮಾಡಿದ್ದಾರೆ. ಜೊತೆಗೆ ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಬಿಹಾರದ ಬೆಟ್ಟಿಯಾದಲ್ಲಿ ನಡೆದಿದೆ. 

 ಮಾರ್ಚ್​​ 19ರಂದು ಹೋಳಿ ಆಚರಣೆ ವೇಳೆ ಡಿಜೆ ಮತ್ತು ಅಶ್ಲೀಲ ಹಾಡು ನುಡಿಸಿದ್ದಕ್ಕಾಗಿ ಅನಿರುಧ್‌ ಯಾದವ್​​ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.  ಲಾಕಪ್​​ನಲ್ಲಿದ್ದ ಆತ ಸಾವನ್ನಪ್ಪಿದ್ದಾರೆ.  ಅನಿರುದ್ಧ್‌ಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರಿಂದ ಸಾವನ್ನಪ್ಪಿದ್ದಾನೆಂಬ ವದಂತಿ ಹರಡಿದೆ. ಹೀಗಾಗಿ, ಕೆಲವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Share Post