ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುವಂತೆ ರಾಯಭಾರ ಕಚೇರಿ ಸೂಚನೆ
ದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿವೆ. ಮುಂದೇನು ಎಂದು ಅಲ್ಲಿನ ಜನ ಟೆನ್ಷನ್ ಆಗಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆದರೆ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಫೆಬ್ರವರಿ 20, 2022 ರ ಭಾನುವಾರದಂದು ಭಾರತದ ರಾಯಭಾರ ಕಚೇರಿ ಪ್ರಮುಖ ಸೂಚನೆಯನ್ನು ತಿಳಿಸಿದೆ.
ಭಾರತೀಯ ವಿದ್ಯಾರ್ಥಿಗಳು ತಕ್ಷಣವೇ ಉಕ್ರೇನ್ ತೊರೆದು ಸ್ವದೇಶಕ್ಕೆ ಮರಳುವಂತೆ ಸೂಚನೆ ಕೊಟ್ಟಿದ್ದಾರೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನತೆಯನ್ನು ಪರಿಗಣಿಸಿ, ಅತ್ಯಂತ ಅಗತ್ಯವಾಗಿರುವವರು ಅಲ್ಲೇ ಇರಬೇಕೆಂದುಕೊಂಡವರನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಿರಿ ಎಂದು ಸಲಹೆ ನೀಡಿದೆ. ಚಾರ್ಟರ್ ಫ್ಲೈಟ್‌ಗಳ ಮಾಹಿತಿ ಪಡೆಯಲು ಸಂಬಂಧಪಟ್ಟವರನ್ನು ಸಂಪರ್ಕಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗದ ಬಗ್ಗೆ ಭಾರತ ಪ್ರತಿಕ್ರಿಯೆ ನೀಡಿದೆ. ಉಕ್ರೇನ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ಮೂರು ವಿಮಾನಗಳನ್ನು ಕಳುಹಿಸಲಾಗಿದೆ. ವಂದೇ ಭಾರತ್ ಮಿಷನ್‌ನ ಅಡಿಯಲ್ಲಿ ಸೇವೆಗಳನ್ನು ನಿರ್ವಹಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಈ ಸೇವೆಗಳು ಉಕ್ರೇನ್‌ನ ಅತಿದೊಡ್ಡ ವಿಮಾನ ನಿಲ್ದಾಣವಾದ ಬೋರಿಸ್ಪಿರಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತವೆ. ಉಕ್ರೇನ್ ಮತ್ತು ಭಾರತ ನಡುವಿನ ಮೂರು ವಿಮಾನಗಳು ಫೆಬ್ರವರಿ 22, 24 ಮತ್ತು 26 ರಂದು ಕಾರ್ಯನಿರ್ವಹಿಸಲಿವೆ ಮತ್ತು ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಬುಕ್ ಮಾಡಬಹುದು ಎಂದು ತಿಳಿಸಿದೆ.