National

ಜಗತ್ತಿನ ಅತಿದೊಡ್ಡ ಮೂರು ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ; ಪ್ರಧಾನಿ ಮೋದಿ

ನವದೆಹಲಿ; ಮುಂದಿನ ದಿನಮಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಜಗತ್ತಿನ ಅತಿದೊಡ್ಡ ಮೂರು ಆರ್ಥಿಕ ದೇಶಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಂಪುಕೋಟೆಯಲ್ಲಿ ಮಾತನಾಡಿದ ಅವರು, ಮುನ್ನುಗ್ಗುತ್ತಿರುವ ಭಾರತವನ್ನು ತಡೆಯುವುದಕ್ಕೆ ಯಾರಿಂದಲೂ ಆಗೋದಿಲ್ಲ ಎಂದು ಹೇಳಿದರು.

ಭಾರತ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೇತೃತ್ವ ವಹಿಸಲಿದೆ. ಜಾಗತಿಕ ಮಟ್ಟದಲ್ಲಿ ದೇಶದ ಸಣ್ಣ ಸಣ್ಣ ನಗರಗಳು ಬೆಳೆಯುತ್ತಿವೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. ಇದರಿಂದ ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವಶಕ್ತಿಗೆ ಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Share Post