ಶಾಂತಿಯಿಂದಿರಿ, ಸರ್ಕಾರ ನಿಮ್ಮ ಜೊತೆಗಿರುತ್ತದೆ; ಮಣಿಪುರದ ಜನತೆಗೆ ಮೋದಿ ಕರೆ
ನವದೆಹಲಿ; ಶಾಂತಿಯಾಗಿರುವಂತೆ ಮಣಿಪುರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ ನಂತರ ಮಾತನಾಡಿದ ಅವರು, ಮಣಿಪುರದ ಹಿಂಸಾಚಾರ ವಿಚಾರವನ್ನು ಪ್ರಸ್ತಾಪ ಮಾಡಿದರು.
ಮಣಿಪುರದಲ್ಲಿ ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಿದೆ. ಇದರಿಂದಾಗಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಎಷ್ಟೇ ನಿಯಂತ್ರಣ ಮಾಡಿದರೂ ಗಲಭೆಗಳು ನಡೆಯುತ್ತಲೇ ಇವೆ. ಮಣಿಪುರದ ಜನ ಶಾಂತಿಯನ್ನು ಕಾಪಾಡಬೇಕು. ನೀವು ಶಾಂತಿ ಕಾಪಾಡಿದರೆ ಸರ್ಕಾರ ನಿಮ್ಮ ನೆರವಿಗೆ ನಿಲ್ಲುತ್ತದೆ. ನಿಮ್ಮ ಸಮಸ್ಯೆಗಳಿಗೆ ಇಡೀ ದೇಶ ಸ್ಪಂದಿಸುತ್ತದೆ ಎಂದು ಮೋದಿ ಹೇಳಿದರು.
ಕೆಲವು ದಿನಗಳಿಂದ ಮಣಿಪುರದಲ್ಲಿ ಶಾಂತಿ ನೆಲೆಸಲು ಆರಂಭವಾಗಿದೆ. ಮಣಿಪುರದ ಜನ ಶಾಂತಿಯಿಂದ ಇರಬೇಕು. ನಾನು ಸದಾ ಮಣಿಪುರದ ಜೊತೆಗಿರುತ್ತೇವೆ. ಇಡೀ ದೇಶವೇ ನಿಮ್ಮ ಜೊತೆ ಇರುತ್ತದೆ. ಮಣಿಪುರದ ಜನರ ಸುರಕ್ಷೆ ಮಾಡಲು ನಾವು ರೆಡಿ ಇದ್ದೇವೆ ಎಂದು ಮೋದಿ ಹೇಳಿದರು.