ಭಾರತದಲ್ಲಿ 62 ಲಕ್ಷ ಡೋಸ್ ಕೋವಿಡ್ ಲಸಿಕೆ ವ್ಯರ್ಥ
ನವದೆಹಲಿ : ಭಾರತದಲ್ಲಿ ೬೨ ಲಕ್ಷದಷ್ಟು ಕೋವಿಡ್ ಡೋಸ್ ವ್ಯರ್ಥವಾಗಿದೆ. ಲೋಕಸಭೆಯಲ್ಲಿ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಕುಮಾರ್ ಅವರ ಹೇಳಿಕೆಯ ಪ್ರಕಾರ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹೆಚ್ಚಾಗಿ ಪೋಲಾಗಿದೆ. ಶೇ ಅರ್ಧಕ್ಕಿಂತ ಹೆಚ್ಚು ಡೋಸ್ಗಳು ಈ ಮೂರು ರಾಜ್ಯಗಳಿಂದಲೇ ವ್ಯರ್ಥವಾಗಿರುವಂಥದ್ದು ಎಂದು ಹೇಳಿದ್ದಾರೆ.
ಒಂದು ಲಕ್ಷಕ್ಕೂ ಅಧಿಕ ಲಸಿಕೆಯನ್ನು ಹಾಳುಮಾಡಿರುವ ರಾಜ್ಯಗಳ ಪಟ್ಟಿಯನ್ನು ನೀಡಿದ್ದಾರೆ. ಕರ್ನಾಟಕಲ್ಲಿ 1.27 ಲಕ್ಷ ಡೋಸ್ ವ್ಯರ್ಥವಾಗಿದೆ.
ಎಲ್ಲೆಲ್ಲಿ ಎಷ್ಟು ಡೋಸ್ ವ್ಯರ್ಥವಾಗಿದೆ ಎಂಬ ಲೀಸ್ಟ್ ಇಂತಿದೆ
ಮಧ್ಯಪ್ರದೇಶ 16.48 ಲಕ್ಷ,
ಉತ್ತರಪ್ರದೇಶ 12.60 ಲಕ್ಷ,
ರಾಜಸ್ಥಾನ 6.86,
ಅಸ್ಸಾಂ 4.58 ಲಕ್ಷ,
ಜಮ್ಮು ಮತ್ತು ಕಾಶ್ಮೀರ 4.57ಲಕ್ಷ,
ಆಂಧ್ರ ಪ್ರದೇಶ 3.80 ಲಕ್ಷ,
ಗುಜರಾತ್ 2.28 ಲಕ್ಷ,
ತಮಿಳುನಾಡು 2.38 ಲಕ್ಷ ,
ತ್ರಿಪುರ 2.10 ಲಕ್ಷ,
ಪಶ್ಚಿಮ ಬಂಗಾಳ 1.14 ಲಕ್ಷ,
ಕರ್ನಾಟಕ 1.27 ಲಕ್ಷ.