LifestyleNational

ಪೂಜಿಸಲೆಂದೆ ಹೂಗಳ ತಂದೆ; ಕನ್ನಡದ ಹಾಡಿಗೆ ತಲೆದೂಗಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು; ಪೂಜಿಸಲೆಂದೇ ಹೂವುಗಳ ತಂದೆ.. ಈ ಹಾಡು ಯಾರು ತಾನೇ ಕೇಳಿಲ್ಲ ಹೇಳಿ.. ಕನ್ನಡಿಗರೆಲ್ಲರಿಗೂ ಅಚ್ಚುಮೆಚ್ಚಿನ ಹಾಡು ಇದು. ಡಾ.ರಾಜ್‌ಕುಮಾರ್‌ ನಟನೆಯ ಎರಡು ಕನಸು ಚಿತ್ರದ ಹಾಡಿದು. ಚಿ.ಉದಯಶಂಕರ್‌ ಬರೆದಿರುವ ಈ ಹಾಡು ಇಂದಿಗೂ ಸಾಕಷ್ಟು ಜನಪ್ರಿಯವಾಗಿದೆ. ಈ ಹಾಡುನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಇಷ್ಟಪಟ್ಟಿದ್ದಾರೆ. ಈ ಬಗ್ಗೆ ಟವರು ಟ್ವೀಟ್‌ ಕೂಡಾ ಮಾಡಿದ್ದಾರೆ.

ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್‌ ಎಂಬುವವರು ಹಾಡಿರುವ ಹಾಡನ್ನು ಯೂಟ್ಯೂಬ್‌ನಲ್ಲಿ ನೋಡಿದ ಮೋದಿಯವರು ಅದಕ್ಕೆ ಮನಸೋತಿದ್ದಾರೆ. ಆ ಹಾಡಿನ ಲಿಂಕ್‌ನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿಯವರು, ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತವೆ ಎಂದು ಹೇಳಿಕೊಂಡಿದ್ದಾರೆ.

ಎರಡು ಕನಸು ಸಿನಿಮಾ 1974 ರಲ್ಲಿ ತೆರೆಗೆ ಬಂದಿತ್ತು. ಎಸ್‌ ಜಾನಕಿ ಈ ಹಾಡನ್ನು ಹಾಡಿದ್ದರು. ಅದೇ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್​ನಲ್ಲಿ ಅಪ್‌ಲೋಡ್‌ ಮಾಡಿದ್ದರು.

 

Share Post