ಖ್ಯಾತ ಕೂದಲು ವಿನ್ಯಾಸಕನ ಅಪ್ರವರ್ತನೆ: ಮಹಿಳೆ ಕಿಡಿ
ಉತ್ತರಪ್ರದೇಶ: ಪ್ರತಿಯೊಂದು ಕ್ಷೇತ್ರದಲ್ಲಿ ನಿಪುಣತೆ ಪಡೆದ ವ್ಯಕ್ತಿಗಳಿರುತ್ತಾರೆ. ಹಅಗೆ ಹೆಣ್ಣುಮಕ್ಕಳ ಮೇಕಪ್ ಮತ್ತು ಕೂದಲು ವಿನ್ಯಾಸದಲ್ಲೂ ಅವರದ್ದೇ ಛಾಪು ಮೂಡಿಸಿ ಹೆಸರು ಪಡೆದವರೂ ಇದಾರೆ. ಅವರಲ್ಲಿ ಫೇಮಸ್ ಹೇರ್ ಡ್ರಸ್ಸರ್ ಜಾವೇದ ಹಬೀಬ್ ಪ್ರವರ್ತನೆ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಹೆಣ್ಮಕ್ಕಳಿಗೂ ಒಳ್ಳೆಳ್ಳೆ ಕೂದಲು ವಿನ್ಯಾಸ ಮಾಡಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಅದರಲ್ಲೂ ಹೆಸರಾಂತ ಕಲಾವಿದರ ಕೈಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದು ತಮ್ಮ ಸದೃಷ್ಟ ಎಂದು ಭಾವಿಸುತ್ತಾರೆ. ಅಂತೆಯೇ ಈ ಮಹಿಳೆ ಕೂಡ ಉತ್ತರಪ್ರದೇಶದ ಮುಜಾಫರ್ ನಗರದ ಕೇಶ ವಿನ್ಯಾಸ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಕಂಡು ಖುಷಿಯಾಗಿ ಆತನಿಂದ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ವೇದಿಕೆ ಹತ್ತಿದ್ದಾರೆ. ಈ ವೇಳೆ ಹಬೀಬ್ನ ಅಪ್ರವರ್ತನೆ ನೋಡಿ ಕಂಗಾಲಾಗಿದ್ದಾರೆ
This is Javed Habeeb… Spitting instead of using water… absolutely horrible ?? pic.twitter.com/8s7xaE8qfO
— Kungfu Pande ??2.0 (@pb3060) January 5, 2022
ಮಹಿಳೆಗೆ ಕೇಶ ವಿನ್ಯಾಸ ಮಾಡಲು ಬಂದ ಜಾವೇದ್ ಹಬೀಬ್ ಹೇರ್ ಕಟ್ ಮಾಡುವ ವೇಳೆ ನೀರನ್ನು ಬಳಸುವ ಬದಲಿಗೆ ಎಂಜಲು ಉಗಿದು ತಲೆ ಬಾಚುತ್ತಾನೆ ಇದನ್ನು ಕಂಡು ಮಹಿಳೆಗೆ ಶಾಕ್ ಆಗಿದೆ. ಇದಕ್ಕೆ ಸಮಜಾತಿಷಿ ಕೂಡ ಆತ ನೀಡಿದ್ದಾನೆ. ನನ್ನ ಕೂದಲು ಇಷ್ಟು ಗಲೀಜಾಗಿ ಇರೋದಕ್ಕೆ ಕಾರನ ನಾನು ಶಾಂಪೂ ಬಳಸದೇ ಇರುವುದು. ಒಂದು ವೇಳೆ ನೀರು ಇಲ್ಲದಿದ್ರೆ ಎಂಜಲನ್ನು ಉಪಯೋಗಿಸಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಹಬೀಬ್ ಮಾಡಿರುವ ಈ ಕೃತ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆ ಮಹಿಳೆ ಕೂಡ ವಿಡಿಯೋ ಮಾಡಿದ್ದು, ಆತ ಮಾಡಿದ ಕೆಲಸದಿಂದ ನನಗೆ ನೋವಾಗಿದೆ. ಇನ್ಯಾವತ್ತು ನಾನು ಆತನ ಬಳಿ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದಿಲ್ಲ. ರಸ್ತೆ ಬದಿ ಬೇಕಾದ್ರೆ ಕೂದಲು ಕಟ್ ಮಾಡಿಸ್ತೀನಿ ಬಿಟ್ರೆ ಆತನ ಬಳಿಗೆ ಹೋಗುವುದಿಲ್ಲ ಎಂದು ಬಹಳ ಖಾರವಾಗಿ ಉತ್ತರಿಸಿದ್ದಾರೆ.