ಗ್ಯಾನವ್ಯಾಪಿ ಮಸೀದಿ ವಿವಾದ; ನಮಾಜ್‌ಗೆ ನಿರ್ಬಂಧವಿಲ್ಲ
ನವದೆಹಲಿ: ಗ್ಯಾನವಾಪಿ ಮಸೀದಿಯಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ಅವಕಾಶ ನೀಡಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಶಿವಲಿಂಗ ಪತ್ತೆ ಆಗಿದೆ ಎನ್ನಲಾಗಿರುವ ಪ್ರದೇಶವನ್ನು ಸಂರಕ್ಷಣೆ ಮಾಡುವಂತೆ ವಾರಾಣಸಿ ಜಿಲ್ಲಾಧಿಕಾರಿಗೆ ಸೂಚಿಸಿರುವ ಕೋರ್ಟ್, ನಮಾಜ್‌ಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಾರ್ಥನೆಗೂ ಮೊದಲು ಬಾವಿಯಲ್ಲಿ ಮುಸ್ಲ್ಮಾನರು ದೇಹಶುದ್ಧಿ ಮಾಡುವ ಆಚರಣೆಗೂ ನ್ಯಾಯಾಲಯ ಅನುಮತಿ ನೀಡಿದೆ.