Districts

ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಕುಟುಂಬಸ್ಥರ ಆಕ್ರಂದನ

ಕಲಬುರಗಿ: ಸಂಜನಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಹಿಳೆ ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ನಾಗಮ್ಮ ಮೃತ ದುರ್ದೈವಿಯಾಗಿದ್ದು, ಈ ಅವಸ್ಥೆಗೆ ವೈದ್ಯರೇ ಕಾರನ ಎಂದು ನಾಗಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.

ವೈದ್ಯರನ್ನು ನಾವು ದೇವರು ಎಂದು ನಂಬುತ್ತೇವೆ ಆದ್ರೆ ಅವರು ನಮ್ಮ ಜೀವದ ಜೊತೆ ಚಲ್ಲಾಟ ಆಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗರ್ಭಕೋಶದ ಸಮಸ್ಯೆಯಿಂದ ನಾಗಮ್ಮ ಬಳಲುತ್ತಿದ್ರು ಒಂದು ವಾರದ ಹಿಂದೆ ಡಾ.ಜಂಪಾ ಅವರ ಸಂಜನಾ ಆಸ್ಪತ್ರೆಗೆ ದಾಖಲು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆದ್ರೆ ಆಪರೇಷನ್‌ ಆದ ಬಳಿಕ ನಾಗಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಕೂಡಲೇ ಡಾ.ಜಂಪಾ ಮತ್ತೊಂದು ಆಪರೇಷನ್‌ ನಡೆಸಿದ್ದಾರೆ. ಈ ವೇಳೆ ನಾಗಮ್ಮಗೆ ತೀವ್ರ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಕೂಡಲೇ ಬೇರೊಂದು ಆಸ್ಪತ್ರೆಗೆ ನಾಗಮ್ಮಳನ್ನು ಶಿಫ್ಟ್‌ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಾಗಮ್ಮ ಸಾವನ್ನಪ್ಪಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ವೈದ್ಯರೇ ಎಂದು ನಾಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಆದ್ರೆ ಡಾ.ಜಂಪಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ ಅಷ್ಟೇ ಅಂದಿದ್ದಾರೆ. ನ್ಯಾಯಕ್ಕಾಗಿ ಆಸ್ಪತ್ರೆ ಬಳಿ ಶವವಿಟ್ಟು ನಾಗಮ್ಮ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

Share Post