National

ಅಗ್ನಿವೀರ್‌ ಪ್ರವೇಶ ಪರೀಕ್ಷೆಗೆ ನೋಂದಣಿ ದಿನಾಂಕ ವಿಸ್ತರಣೆ

ನವದೆಹಲಿ; ಅಗ್ನಿವೀರ್‌ ಆಯ್ಕೆಗೆ ಪ್ರವೇಶ ಪರೀಕ್ಷೆಗೆ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅಗ್ನಿವೀರ್‌ ಸ್ಕೀಂ ಪ್ರವೇಶ ಪರೀಕ್ಷೆ ಆನ್‌ ಲೈನ್‌ ನೋಂದಣಿಗೆ ಫೆಬ್ರವರಿ 15 ರಿಂದ ಮಾರ್ಚ್‌ 15ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಇದೀಗ ಅದನ್ನು ಮಾರ್ಚ್‌ 23ರ ಮಧ್ಯರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ.

ಭಾರತೀಯ ಸೇನೆಗೆ ಸೈನಿಕರ ಸೇರ್ಪಡೆಗಾಗಿ ಅಗ್ನಿವೀರ್ ಪ್ರವೇಶ ಯೋಜನೆಯನ್ನು 2022 ರಲ್ಲಿ ಪ್ರಾರಂಭಿಸಲಾಯಿತು. ಇದಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅಗ್ನಿವೀರ್‌ ಯೋಜನೆಯಲ್ಲಿ ಸೇನೆಗೆ ಸೇರಬೇಕಾದರೆ ಮೊದಲು ಪ್ರವೇಶ ಪರೀಕ್ಷೆ ಬರೆಯಬೇಕು. ಅದರಲ್ಲಿ ಆಯ್ಕೆಯಾದವರಿಗೆ ದೈಹಿಕ ಪರೀಕ್ಷೆ ಇರುತ್ತದೆ. ಅಗ್ನಿವೀರ್‌ ಯೋಜನೆಯಲ್ಲಿ ಆಯ್ಕೆಯಾದವರು ಐದು ವರ್ಷ ಸೇನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅನಂತರ ವಾಪಸ್‌ ಬಂದು ರಾಜ್ಯ ಸರ್ಕಾರದಿಂದ ಅರ್ಹತೆಗೆ ತಕ್ಕ ಉದ್ಯೋಗ ಪಡೆಯಬಹುದು.  ಹೆಚ್ಚಿನ ವಿವರಗಳು ಬೇಕಂದ್ರೆ  joinindianarmy.nic.in ನಲ್ಲಿ ಪಡೆಯಬಹದು. 

Share Post