National

ಅಕ್ರಮವಾಗಿ ಚಿನ್ನ ಸಾಗಾಟ; 3.33 ಕೆಜಿ ಬಂಗಾರದ ಬಿಸ್ಕೆಟ್‌ ವಶ..!

ರಾಯ್ಪುರ: ಅಕ್ರಮವಾಗಿ ಸೊಂಟದಲ್ಲಿ ಕಟ್ಟಿಕೊಂಡು ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ವಿದೇಶಿ ಮೂಲದ ವ್ಯಕ್ತಿಯನ್ನು ರಾಯ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿ ಕೋಲ್ಕತ್ತಾದಿಂದ ನಾಗಪುರಕ್ಕೆ ಪ್ರಯಾಣಿಸುತ್ತಿದ್ದ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಒಂದು ಬಟ್ಟೆಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಜೋಡಿಸಿಕೊಂಡು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಪ್ರಯಾಣ ಮಾಡುತ್ತಿದ್ದ. ಈ ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 3.33 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Share Post