NationalPolitics

ಕರ್ನಾಟಕದ ರೈತರು ತೆಲಂಗಾಣದಲ್ಲಿ ಪ್ರತಿಭಟನೆ; ಕಾರಣ ಏನು ಗೊತ್ತಾ..?

ಹೈದರಾಬಾದ್‌; ಕರ್ನಾಟಕದಲ್ಲಿ ನೀಡುತ್ತಿರುವ ವಿದ್ಯುತ್ ಸಾಕಾಗುತ್ತಿಲ್ಲ ಎಂದು ಆ ರಾಜ್ಯದ ಹಲವು ರೈತರು ತೆಲಂಗಾಣದಲ್ಲಿ ಮುಷ್ಕರ ನಡೆಸಿದ್ದಾರೆ. ಇಂದಿರಾ ಪಾರ್ಕ್‌ನಲ್ಲಿ ರೈತರು ಧರಣಿ ನಡೆಸಿದ ಹಲವು ರೈತರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರ ತಿಳಿದ ತೆಲಂಗಾಣ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. 

ನಿಮಗೆ ಕರ್ನಾಟಕದಲ್ಲಿ ಸಮಸ್ಯೆ ಆಗಿದ್ದರೆ ಅಲ್ಲಿ ಹೋಗಿ ಪ್ರತಿಭಟನೆ ಮಾಡಿ, ತೆಲಂಗಾಣಕ್ಕೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಧರಣಿ ಮುಂದುವರೆಸಿದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಅಂದಹಾಗೆ, ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಕಾಂಗ್ರೆಸ್‌ ಶಕ್ತಿ ಕುಂದಿಸಲೆಂದೇ ವಿರೋಧ ಪಕ್ಷಗಳು ಕರ್ನಾಟಕದಿಂದ ರೈತರನ್ನು ಕರೆಸಿವೆ ಎಂದು ಆರೋಪಿಸಲಾಗಿದೆ.

 

 

 

Share Post