National

ರಾಜ್ಯದ 4 ಸೇರಿ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; ಜೂನ್‌ 10ಕ್ಕೆ ಮತದಾನ

ನವದೆಹಲಿ: ಖಾಲಿಯಾಗಿರುವ ಹಾಗೂ ಮುಂದಿನ ತಿಂಗಳಲ್ಲಿ ಖಾಲಿಯಾಗಲಿರುವ ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್‌ 10ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಹದಿನೈದು ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2022ರ ಜೂನ್‌–ಆಗಸ್ಟ್‌ ನಡುವೆ 57 ಸಂಸದರ ಸ್ಥಾನ ತೆರವಾಗಲಿವೆ.

ರಾಜ್ಯದಿಂದ ನಿರ್ಮಲಾ ಸೀತಾರಾಮನ್‌, ಜೈರಾಮ್‌ ರಮೇಶ್‌, ಕೆ.ಸಿ.ರಾಮಮೂರ್ತಿ ಹಾಗೂ ದಿವಂಗತ ಆಸ್ಕರ್‌ ಫರ್ನಾಂಡಿಸ್‌ (2021ರ ಸೆಪ್ಟೆಂಬರ್‌ನಿಂದ ತೆರವು) ಸೇರಿ ನಾಲ್ಕು ಸ್ಥಾನಗಳು ಜೂನ್‌ 30ರಂದು ತೆರವಾಗಲಿವೆ. ಉತ್ತರ ಪ್ರದೇಶದ 11 ಸಂಸದರು ನಿವೃತ್ತರಾಗಲಿದ್ದಾರೆ. ಹೀಗೆ ಹದಿನೈದು ರಾಜ್ಯಗಳ ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜೂನ್‌ 10ರಂದು ಮತದಾನ ನಡೆಯಲಿದ್ದು, ಅಂದು ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ 31 ಕೊನೆಯ ದಿನವಾಗಿದೆ. ಈ ಚುನಾವಣಾ ಫಲಿತಾಂಶ ರಾಷ್ಟ್ರಪತಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇದರ ಮೇಲೆ ಎಲ್ಲರ ಗಮನ ನೆಟ್ಟಿದೆ.

 

Share Post