InternationalNationalPolitics

ಏಷ್ಯಾ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಅಡಿಗಲ್ಲು

ನೋಯ್ಡಾ (ಉತ್ತರ ಪ್ರದೇಶ): ಏಷ್ಯಾದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕು ಸ್ಥಾಪನೆ ನೆರವೇರಿಸಿದರು.

ಉತ್ತರ ಪ್ರದೇಶದಲ್ಲಿ ಜೇವಾರ್‌ನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ದೆಹಲಿಯಿಂದ ೮೦ ಕಿಲೋ ಮೀಟರ್‌ ದೂರದಲ್ಲಿದೆ. 30 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು, ಭಾರತದಲ್ಲೇ ಮೊದಲ ಮಾಲಿನ್ಯ ರಹಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ.

 

ಜೇವಾರ್‌ ವಿಮಾನ ನಿಲ್ದಾಣದ ವಿಶೇಷತೆಗಳೇನು..?

  1. 30 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚ
  2. ಏಷ್ಯಾದಲ್ಲೇ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಖ್ಯಾತಿ
  3. ವರ್ಷದಲ್ಲಿ 1.2 ಕೋಟಿ ಜನರು ಪ್ರಯಾಣಿಸಲು ಅವಕಾಶ
  4. ಈ ವಿಮಾನ ನಿಲ್ದಾಣದಲ್ಲಿ ಒಟ್ಟು 5 ರನ್‌ ವೇಗಳಿವೆ
  5. 80 ಲಕ್ಷ ಟನ್‌ ಕಾರ್ಗೊ ಸಾಮರ್ಥ್ಯ ಹೊಂದಿರುವ ನಿಲ್ದಾಣವಿದು
  6. ದೆಹಲಿಯಿಂದ 80 ಕಿಲೋ ಮೀಟರ್‌ ದೂರದಲ್ಲಿದೆ
  7. 1300 ಹೆಕ್ಟೇರ್‌ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
  8. ಮೊದಲ ಹಂತದ ಅಭಿವೃದ್ಧಿಗೆ 10,050 ಕೋಟಿ ರೂಪಾಯಿ ಬಿಡುಗಡೆ
  9. 2024ರೊಳಗೆ ವಿಮಾನ ನಿಲ್ದಾಣದ ಕಾಮಗಾರಿ ಮುಗಿಯುವ ಸಾಧ್ಯತೆ
Share Post