National

ಮ್ಯಾನ್ಮಾರ್‌ ಗಡಿಯಲ್ಲಿ ಕಂಪಿಸಿದ ಭೂಮಿ

ನವದೆಹಲಿ: ಇಂದು ಬೆಳಗ್ಗೆ ಮ್ಯಾನ್ಮಾರ್‌ – ಭಾರತದ ಗಡಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ. ಈ ಬಗ್ಗೆ ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಭೂಕಂಪವು ಬಾಂಗ್ಲಾದೇಶದ ಚಿತ್ತಗಾಂಗ್​​ನಿಂದ 174 ಕಿ.ಮೀ ಪೂರ್ವಕ್ಕೆ ಅಪ್ಪಳಿಸಿದೆ. ಪೂರ್ವ ಭಾರತದ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನಲ್ಲಿ ಕಂಪನವಾಗಿದೆ ಎಂದು ಭೂಕಂಪನ ಕೇಂದ್ರ ತಿಳಿಸಿದೆ.

EMSC ಅಂದರೆ ಯೂರೊ-ಮೆಡಿಟರೇನಿಯನ್‌ ಭೂಕಂಪನ ಕೇಂದ್ರ ತನ್ನ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮಾಹಿತಿ ಪ್ರಕಾರ, ಕೊಲ್ಕತ್ತಾ ಮತ್ತು ಗುವಾಹಟಿಯ ಹೆಚ್ಚಿನ ಭಾಗಗಳಲ್ಲಿ ಭೂಕಂಪನವು ಸುಮಾರು 30 ಸೆಕೆಂಡುಗಳ ಕಾಲ ಸಂಭವಿಸಿತು. ದೀರ್ಘವಾದ ಅಲುಗಾಡುವಿಕೆಯ ಅನುಭವ ಆಗಿತ್ತು. ಜೊತೆಗೆ ಅದರ ಪರಿಣಾಮಗಳನ್ನು ಅನುಭವಿಸಲಾಯಿತು ಎಂದು ಬರೆದುಕೊಂಡಿದೆ.

Share Post