ಸೇನಾ ಹೆಲಿಕಾಪ್ಟರ್ ಪತನ; ಧರೆಗುರುಳಿದ ಎಎಲ್‌ಹೆಚ್ ಧ್ರುವ
ಶ್ರೀನಗರ; ಜಮ್ಮು ಕಾಶ್ಮೀರದ ಕಿಶ್ತ್ವರ್ ಜಿಲ್ಲೆ ಮಚ್ನಾ ಎಂಬಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಬದುಕುಳಿದಿದ್ದಾರೆ. ಎಲ್ಲರನ್ನೂ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಎಲ್‌ಹೆಚ್ ಧ್ರುವ ಎಂಬ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಹೆಲಿಕಾಪ್ಟರ್. ಇದರಲ್ಲಿ ಮೂರು ಮಂದಿ ಇದ್ದರು ಎಂದು ತಿಳಿದುಬಂದಿದೆ. ಮೂವರೂ ಗಾಯಗೊಂಡಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೂವರೂ ಸುರಕ್ಷಿತವಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದು ಹೆಚ್‌ಎಎಲ್ ನಿರ್ಮಿಸಿರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಹೆಚ್ ಧ್ರುವ) ಎಂದು ತಿಳಿದುಬಂದಿದೆ. ಎರಡು ತಿಂಗಳಿಂದೀಚೆಗೆ ಇದೇ ಹೆಲಿಕಾಪ್ಟರ್‌ಗಳು ಮೂರು ಬಾರಿ ಪತನವಾಗಿದೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ತಜ್ಞರು ಪರಿಶೀಲನೆ ಮಾಡುತ್ತಿದ್ದಾರೆ.