Cinema

83 ಟ್ರೈಲರ್‌ ನೋಡಿದ ಜನ ಫುಲ್‌ ಖುಷ್‌

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 83 ಸಿನಿಮಾ ಟ್ರೇಲರ್‌ ರಿಲೀಸ್ ಆಗಿದ್ದು, ಅಭಿಮಾನಿಗಳು ಟ್ರೇಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.

ಕೋವಿಡ್‌ ಕಾರಣದಿಂದ ಬಿಡುಗಡೆ ತಡವಾಗಿತ್ತು. ಇದೇ ಕ್ರಿಸ್ಮಸ್‌ಗೆ ತೆರೆಗೆ ಬರಲು ೮೩ ಸಿನಿಮಾ ತಯಾರಿದೆ. ಕಪಿಲ್‌ ದೇವ್‌ ಅವರ ಪಾತ್ರ ನಿರ್ವಹಿಸಿರುವ ರಣವೀರ್‌ ಸಿಂಗ್‌ ಈ ಚಿತ್ರದ ಟ್ರೈಲರ್‌ ಅನ್ನು ತಮ್ಮ ಸಾಮಾಜಿಕ ಅಕೌಂಟ್‌ ಗಳಲ್ಲಿ ಶೇರ್‌ ಮಾಡಿದ್ದಾರೆ.

ಟ್ರೇಲರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದವರ ಜರ್ನಿ, ಅವರ ಹೋರಾಟ, ಗೆಲುವುಗಳು ಮತ್ತು ಸೋಲುಗಳನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಟ್ರೇಲರ್‌ನಲ್ಲಿ ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ರಣ್‍ವೀರ್ ​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

Share Post