National

ಡೇರಾ ಬಾಬಾ ಇಂದು ಜೈಲಿನಿಂದ ಬಿಡುಗಡೆ ಸಾಧ್ಯತೆ

ನವದೆಹಲಿ: ಡೇರಾ ಬಾಬಾ ಎಂದೇ ಖ್ಯಾತರಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಇತ್ತೀಚೆಗೆ ಪೆರೋಲ್ ನೀಡಲಾಗಿದೆ. ಇಂದು ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಡೇರಾ ಸಚ್ಚಾ ಸೌದಾ ಆಶ್ರಮವನ್ನು ನಡೆಸುತ್ತಿರುವ ಡೇರಾ ಬಾಬಾ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಅವರು 2017 ರಿಂದ ಹರಿಯಾಣದ ರೋಹ್ಟಕ್ ಜೈಲಿನಲ್ಲಿದ್ದಾರೆ. ಆತನ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪವಿದೆ.

ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧದ ಮ್ಯಾನೇಜರ್ ರಂಜಿತ್ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹದಿನಾರು ವರ್ಷಗಳ ಹಿಂದೆ ಒಬ್ಬ ಪತ್ರಕರ್ತನನ್ನು ಕೊಂದ ಆರೋಪ ಇವರ ಮೇಲಿದೆ. ಡೇರಾ ಬಾಬಾ ಪ್ರಸ್ತುತ ಹಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಂದಿನಿಂದ ಜೈಲಿನಲ್ಲಿರುವ ಡೇರಾ ಬಾಬಾ ಆಗಾಗ ಪೆರೋಲ್ ಮೇಲೆ ಹೊರಬರುತ್ತಾನೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಪೆರೋಲ್ ಮೇಲೆ ಜೈಲಿನಿಂದ ಹೊರಬಂದರು. ನಂತರ ಅವರು ಸುಮಾರು ಎರಡು ವಾರಗಳ ಕಾಲ ಹೊರಗಿದ್ದರು.

ಈಗ ಹೊಸದಾಗಿ ಮತ್ತೊಮ್ಮೆ ಒಂದು ತಿಂಗಳ ಪೆರೋಲ್ ನೀಡಲಾಯಿತು. ಈ ಬಾರಿ ಅವರು ಉತ್ತರ ಪ್ರದೇಶದ ಬರ್ನಾವಾದಲ್ಲಿರುವ ತಮ್ಮ ಆಶ್ರಮ ಡೇರಾ ಸಚ್ಚಾ ಸೌಧಕ್ಕೆ ಹೋಗಲಿದ್ದಾರೆ. ಒಂದು ತಿಂಗಳು ಅಲ್ಲಿಯೇ ಇರಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಜಡ್ ಕೆಟಗರಿಯ ಭದ್ರತೆ ಇರುತ್ತದೆ. ಅವರಿಗೆ ಖಲಿಸ್ತಾನ ಪರ ಜನರಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಜಡ್ ಕೆಟಗರಿಯ ಭದ್ರತೆಯನ್ನು ನೀಡುತ್ತಿದೆ. ಶುಕ್ರವಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Share Post