National

ಪ್ರಶಾಂತ್‌ ನೀಲ್‌ ದಂಪತಿ, ಎನ್‌ಟಿಆರ್‌ ದಂಪತಿಯ ವಿವಾಹ ವಾರ್ಷಿಕೋತ್ಸವ

ಹೈದರಾಬಾದ್; ನಿನ್ನೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಇತ್ತ ತೆಲುಗಿನ ಸ್ಟಾರ್‌ ನಟ ಜ್ಯೂನಿಯರ್‌ ಎನ್‌ಟಿಆರ್‌ ದಂಪತಿ ವಿವಾಹ ವಾರ್ಷಿಕೋತ್ಸವವೂ ಇತ್ತು. ಎರಡೂ ದಂಪತಿಗಳು ಒಟ್ಟಿಗೆ ಸೇರಿ ವಿವಾಹ ವಾರ್ಷಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಎನ್‌ಟಿಆರ್‌ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಎನ್‌ಟಿಆರ್‌ಗೆ ಪ್ರಶಾಂತ್‌ ನೀಲ್‌ ಚಿತ್ರವೊಂದಕ್ಕೆ ಆಕ್ಷನ್‌ ಕಟ್‌ ಹೇಳೋದು ಪಕ್ಕಾ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಎರಡೂ ಕುಟುಂಬಗಳ ನಡುವೆ ಸ್ನೇಹ ಬೆಳೆದಿದೆ. ನಿನ್ನೆ ಎರಡೂ ಕುಟುಂಬಗಳು ಒಟ್ಟಿಗೆ ವಿವಾಹ ವಾರ್ಷಕೋತ್ಸವ ಆಚರಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದಲ್ಲಿ ತೆರೆಕಂಡ ಆರ್‌ಆರ್‌ಆರ್‌ ಚಿತ್ರದಲ್ಲಿ ಎನ್‌ಟಿಆರ್‌, ರಾಮ್ ಚರಣ್‌ ನಟಿಸಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇತ್ತ ಪ್ರಶಾಂತ್ ನೀಲ್‌ ನಿರ್ದೇಶನದ ಕೆಜಿಎಫ್‌–2 ದೊಡ್ಡ ಮಟ್ಟದ ಹಿಟ್‌ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕ್ಲಬ್‌ ಸೇರಿದೆ.

Share Post