33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅನುಮತಿ
ನವದೆಹಲಿ; 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅನುಮತಿ ನೀಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಸಂಬಂಧದ ಕೇಸ್ ಒಂದರ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ. ಸಿಂಗ್, ಇದರಲ್ಲಿ ತಾಯಿಯ ಆಯ್ಕೆಯೇ ಅಂತಿಮ ಎಂದು ಹೇಳಿದ್ದಾರೆ. ತಾಯಿಯ ಇಚ್ಛೆಗೆ ಆಧಾರದ ಮೇಲೆ ಅನುಮತಿ ನೀಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
33 ವಾರಗಳ ಗರ್ಭಿಣಿಯೊಬ್ಬರು ತಮ್ಮ ಗರ್ಭಾವಸ್ಥೆಯನ್ನು ತೆಗೆಸಲು ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್, ಎನ್‌ಎನ್‌ಜೆಪಿ ಆಸ್ಪತ್ರೆ ವೈದ್ಯರ ಸಲಹೆ ಕೇಳಿದ್ದರು. ಆದರೆ ವರದಿಯಲ್ಲಿ ವೈದ್ಯರು ಗರ್ಭಪಾತವನ್ನು ತಿರಸ್ಕರಿಸಿದ್ದರು.