National

ಚನ್ನೈನ ಈಸ್ಟ್‌ ಕೋಸ್ಟ್‌ ಗಾರ್ಡ್ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ

ಚನ್ನೈ: ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ಚೆನ್ನೈನಲ್ಲಿರುವ ಈಸ್ಟ್ ಕೋಸ್ಟ್ ಗಾರ್ಡ್ ರೀಜಿನ್‌ನಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನಾಗರಿಕ ಹುದ್ದೆಗಳಿಗೆ ಸಂಬಂಧಿಸಿದಂತೆ ಒಟ್ಟು 80 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಖಾಲಿಯಿರುವ ಹುದ್ದೆಗಳ ವಿವರ ನೋಡೂವುದಾದರೆ, ಇಂಟನ್ ಡ್ರೈವರ್, ಸಾರಂಗ್ ಲಾಸ್ಕರ್, ಸ್ಟೋರ್ ಕೀಪರ್, ಸಿವಿಲಿಯನ್ ಮೋಟಾರ್ ಟ್ರಾನ್ಸ್‌ಪೋರ್ಟ್ ಡ್ರೈವರ್, ಫೈರ್‌ಮ್ಯಾನ್, ಐಸ್ ಫಿಟ್ಟರ್, ಸ್ಪ್ರೇ ಪೇಂಟರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಶೀಟ್ ಮೆಟಲ್ ವರ್ಕರ್, ಇತ್ಯಾದಿ.

ಅರ್ಹತೆ: ಹತ್ತನೇ ತರಗತಿ, ಐಟಿಐ ಜೊತೆಗೆ ಸಂಬಂಧಿತ ವಿಷಯಗಳಲ್ಲಿ ಪದವಿ ಮುಗಿಸಿರಬೇಕು ಮತ್ತು ಕೆಲಸದ ಅನುಭವವನ್ನು ಹೊಂದಿರಬೇಕಾಗಿದೆ.

ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷ ಆಗಿರಬೇಕು. ಆಯ್ಕೆಯು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆಯನ್ನು ಆಧರಿಸಿದೆ. ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ; ಕಮಾಂಡರ್, ಕೋಸ್ಟ್ ಗಾರ್ಡ್ ಪ್ರದೇಶ (ಪೂರ್ವ), ಮೈ ಫೈರ್ ಬ್ರಿಡ್ಜ್ ಹತ್ತಿರ, ಸೇಂಟ್ ಜಾರ್ಜ್ ಬಂದರು, ಚೆನ್ನೈ 600009.

ಸಂಪೂರ್ಣ ವಿವರಗಳಿಗಾಗಿ ವೆಬ್‌ಸೈಟ್: https: //indiancoastguard.gov.in/

Share Post