National

ಭಾರತದಲ್ಲಿ 2ಲಕ್ಷ ಗಡಿ ದಾಟಿದ ಕೊರೊನಾ ಪ್ರಕರಣಗಳು

ದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಸಂಖ್ಯೆ ವಾಯು ವೇಗದಲ್ಲಿ ಹೆಚ್ಚಾಗ್ತಿದೆ. ಒಂದೇ ದಿನದಲ್ಲಿ ಕೊರೊನ ಪ್ರಕರಣಗಳು ೨ಲಕ್ಷ ಗಡಿ ದಾಟಿದೆ. 24 ಗಂಟೆಯಲ್ಲಿ ಬರೋಬ್ಬರಿ  2,64,202 ಪ್ರಕರಣಗಳು ದಾಖಲಾಗಿವೆ. ಸೋಂಕಿಗೆ 315 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಇಲ್ಲಿವರೆಗೂ ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073ಕ್ಕೆ ಏರಿದೆ. ಪಾಸಿಟಿವಿಟಿ ರೇಟ್‌ ನಿನ್ನೆಗಿಂತ ಶೇಕಡಾ 6.7 ರಷ್ಟು ಹೆಚ್ಚಾಗಿದ್ದು,  ಒಟ್ಟಾರೆ ಪಾಸಿಟಿವಿಟಿ ದರ 14.78ಕ್ಕೆ ಹೆಚ್ಚಾಗಿದೆ. 24 ಗಂಟೆಯಲ್ಲಿ  1,09,345 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.  ಪ್ರಸ್ತುತ 5,753 ಓಮಿಕ್ರಾನ್ ಪ್ರಕರಣಗಳು ಆಕ್ಟೀವ್‌ ಆಗಿವೆ.

ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಲಿದೆ. ಮನೆಯಲ್ಲಿ ಐಸೋಲೇಷನ್‌ ಆಗಿರುವವರ ಸಂಖ್ಯೆ ಹೆಚ್ಚಾಗಿದೆ. ನೆಗಡಿ, ಶೀತ, ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಅಧಿಕವಾಗಿದೆ.

 

Share Post