National

ಹೈದರಾಬಾದ್‌ನಲ್ಲಿ ಹಳಿ ತಪ್ಪಿದ ಚಾರ್ಮಿನಾರ್‌ ಎಕ್ಸ್‌ಪ್ರೆಸ್‌

ಹೈದರಾಬಾದ್‌; ಹೈದರಾಬಾದ್‌ನಲ್ಲಿ ರೈಲೊಂದು ಹಳಿ ತಪ್ಪಿದೆ. ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ಮಿನಾರ್ ಎಕ್ಸ್‌ಪ್ರೆಸ್‌ಗೆ ಸಣ್ಣ ಅಪಘಾತ ಸಂಭವಿಸಿದೆ. ಚಾರ್ಮಿನಾರ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 9.15ಕ್ಕೆ ಈ ಅವಘಡ ಸಂಭವಿಸಿದೆ. ನಾಂಪಲ್ಲಿ ರೈಲು ನಿಲ್ದಾಣವು ರೈಲುಗಳು ನಿಲ್ಲುವ ಟರ್ಮಿನಲ್ ನಿಲ್ದಾಣವಾಗಿದೆ. ರೈಲು ಪ್ರಯಾಣ ಮುಗಿಸಿ ಕೊನೆಗೆ ಅಲ್ಲಿಯೇ ನಿಲ್ಲಬೇಕು. ಆದ್ರೆ ಅದು ಅಲ್ಲಿಂದ ಮುಂದಕ್ಕೆ ಸಾಗಿದ್ದರಿಂದ ಮೂರು ಭೋಗಿಗಳು ಹಳಿ ತಪ್ಪಿವೆ. 

ಇದರಿಂದಾಗಿ ರೈಲಿನ ಬಾಗಿಲಿನ ಬಳಿ ನಿಂತಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ದಕ್ಷಿಣ ಮಧ್ಯ ರೈಲ್ವೆ ಸಿಪಿಆರ್‌ಒ ರಾಕೇಶ್ ಮಾಹಿತಿ ನೀಡಿದ್ದು, ಗಾಯಾಳುಗಳಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Share Post