CrimeNational

ಆರ್‌ಜೆಡಿ ನಾಯಕರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳ ದಾಳಿ

ಪಾಟ್ನಾ; ಆರ್‌ಜೆಡಿಯ ಹಲವು ನಾಯಕರ ಮನೆಗಳು ಸೇರಿ ಬಿಹಾರದ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಏಕಕಾಲದಲ್ಲಿ ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉದ್ಯೋಗಕ್ಕೆ ಬದಲಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸುತ್ತಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಆರ್‌ಜೆಡಿ ಎಂಎಲ್‌ಸಿ ಸುನಿಲ್ ಸಿಂಘ್, ಅಶ್ಫಾಕ್ ಕರೀಂ, ಫಯಾಜ್ ಅಹ್ಮದ್ ಹಾಗೂ ಆರ್‌ಜೆಡಿಯ ಮಾಜಿ ಎಂಎಲ್‌ಸಿ ಸುಬೋಧ್ ರಾಯ್ ಅವರ ಪಾಟ್ನಾದ ನಿವಾಸಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಸುನಿಲ್‌ ಸಿಂಘ್‌, ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ. ಇದಕ್ಕೆ ಅರ್ಥವಿಲ್ಲ. ಭಯದಿಂದ ಶಾಸಕರು ತಮ್ಮ ಬಳಿ ಬರಬಹುದು ಎಂದು ಭಾವಿಸಿ ಹೀಗೆ ಮಾಡುತ್ತಿದ್ದಾರೆ ಎಂದು

ಆರೋಪಿಸಿದ್ದಾರೆ.

 

Share Post