National

ಗಾಜಿಯಾಬಾದ್‌ಗೆ ಬುಲೆಟ್‌ ರೈಲು ಕೋಚ್‌ಗಳ ಆಗಮನ; ಮುಂದಿನ ವರ್ಷ ಸಂಚಾರ

ಗಾಜಿಯಾಬಾದ್; ಗಂಟೆಗೆ ಗರಿಷ್ಠ 180 ಕಿ.ಮೀ ವೇಗ ಮತ್ತು ಸರಾಸರಿ 100 ಕಿ.ಮೀ ವೇಗದಲ್ಲಿ ಓಡುವ ದೇಶದ ಮೊದಲ ಬುಲೆಟ್‌ ರೈಲಿನ ಕೋಚ್‌ಗಳು ಗಾಜಿಯಾಬಾದ್ ತಲುಪಿವೆ. ಗುಜರಾತ್‌ನಿಂದ ಗಾಜಿಯಾಬಾದ್‌ಗೆ ಟ್ರೇಲರ್ ಮೂಲಕ ಕೋಚ್‌ಗಳನ್ನು ತರಲಾಗಿದೆ. ಇಂದು ಅವುಗಳನ್ನು ಟ್ರೈಲರ್‌ನಿಂದ ಇಳಿಸಿ ದುಹಾಯ್ ಡಿಪೋಗೆ ತರಲಾಗಿದೆ.

ಬುಲೆಟ್‌ ರೈಲಿನ ಕೋಚ್‌ಗಳನ್ನು ಜೋಡಿಸುವ ಕೆಲಸ ಆರಂಭಿಸಲಾಗಿದೆ. ಇದಾದ ಬಳಿಕ ಅದರ ಮೊದಲ ಹಂತದ ಪ್ರಯೋಗ ಆರಂಭವಾಗಲಿದೆ. ಮೂರು ಹಂತಗಳಲ್ಲಿ ಪ್ರಾಯೋಗಿಕ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ಮಾರ್ಚ್ 2023 ರಿಂದ ಸಾಹಿಬಾಬಾದ್‌ನಿಂದ ದುಹೈವರೆಗೆ ಬುಲೆಟ್‌ ರೈಲು ಸಂಚಾರ ಆರಂಭವಾಗಲಿದೆ. ಮಾರ್ಚ್‌ 2025ಕ್ಕೆ ಸರೈ ಕಾಲೇ ಖಾನ್‌ನಿಂದ ಮೀರತ್ ನಡುವೆ ಕ್ಷಿಪ್ರ ರೈಲು ಸಂಚಾರ ಶುರುವಾಗಲಿದೆ.

ದುಹೈ ಡಿಪೋದಲ್ಲಿ ರ್ಯಾಪಿಡ್ ರೈಲಿನ ಪ್ರಯೋಗಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಡಿಪೋದಲ್ಲಿ ರೈಲು ಮಾರ್ಗಗಳನ್ನು ಹಾಕಲಾಗಿದೆ. ಕಾರ್ಯಾಗಾರಕ್ಕೆ ಶೆಡ್‌ಗಳು ಸಿದ್ಧವಾಗಿವೆ. ಕ್ಷಿಪ್ರ ರೈಲುಗಳ ಪರೀಕ್ಷೆ ಮತ್ತು ನಿರ್ವಹಣೆಗಾಗಿ, 11 ಸ್ಟೇಬ್ಲಿಂಗ್ ಲೈನ್‌ಗಳು, ಎರಡು ವರ್ಕ್‌ಶಾಪ್ ಲೈನ್‌ಗಳು ಮತ್ತು ಒಂದು ಹೆವಿ ಇಂಟರ್ನಲ್ ಕ್ಲೀನಿಂಗ್ (ಎಚ್‌ಇಸಿ) ಲೈನ್ ಅನ್ನು ದುಹೈ ಡಿಪೋದಲ್ಲಿ ನಿರ್ಮಿಸಲಾಗಿದೆ.

ಆಕರ್ಷಕ ಮತ್ತು ಆಧುನಿಕ ವಿನ್ಯಾಸದೊಂದಿಗೆ ಬುಲೆಟ್‌ ರೈಲಿನ ಕೋಚ್‌ಗಳು ಕಡಿಮೆ ತೂಕದ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆ ಹೊಂದಿವೆ.  ಸ್ವಯಂಚಾಲಿತ ರೈಲು ರಕ್ಷಣೆ (ATP), ಸ್ವಯಂಚಾಲಿತ ರೈಲು ನಿಯಂತ್ರಣ (ATC) ಮತ್ತು ಸ್ವಯಂಚಾಲಿತ ರೈಲು ಕಾರ್ಯಾಚರಣೆ (ATO) ಗಳನ್ನು ಹೊಂದಿದೆ.

Share Post