National

ಯುದ್ಧನೌಕೆಯಲ್ಲಿ ಭಾರಿ ಸ್ಫೋಟ; ಮೂವರು ಸಿಬ್ಬಂದಿ ಸಾವು

ಮುಂಬೈ: ಭಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಐಎನ್‌ಎಸ್‌ ರಣವೀರ್‌ ಯುದ್ಧ ನೌಕೆಯಲ್ಲಿ ಈ ದುರಂತ ಸಂಭವಿಸಿದ್ದು, ನೌಕಾಪಡೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಹತ್ತಕ್ಕೂ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಮುಂಬೈನ ನೌಕಾನೆಲೆಯಲ್ಲಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಯುದ್ಧನೌಕೆಯ ಆಂತರಿಕ ವಿಭಾಗದಲ್ಲಿ ಒಮ್ಮೆಲೆ ಭಾರಿ ಶಬ್ದ ಬಂದಿದೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Share Post