National

ಆಂಧ್ರ ವಿಧಾನಸಭೆಯಲ್ಲಿ ಗದ್ದಲ; 5 ಟಿಡಿಪಿ ಶಾಸಕರು ಸಸ್ಪೆಂಡ್‌

ಅಮರಾವತಿ: ಜಂಗಾರೆಡ್ಡಿಗುಡೆಂನಲ್ಲಿ ನೂರುಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಇದಕ್ಕೆ ನಕಲಿ ಮದ್ಯವೇ ಕಾರಣ ಎಂದು ಆರೋಪಿಸಿ ಟಿಡಿಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಆಂಧ್ರ ವಿಧಾನಸಭಾ ಕಲಾಪದ ವೇಳೆ ಸದನದ ಬಾವಿಗಿಳಿದು ಪ್ರತಿಭಟಿಸಿದ ಟಿಡಿಪಿ ಶಾಸಕರು, ಸ್ಪೀಕರ್‌ ಮೇಲೆ ಪೇಪರ್‌ಗಳನ್ನು ಎಸೆದಿದ್ದಾರೆ. ಈ ಕಾರಣಕ್ಕಾಗಿ ಐವರು ಶಾಸಕರನ್ನು ಬಜೆಟ್‌ ಅಧಿವೇಶನ ಮುಗಿಯುವವರೆಗೂ ಅಮಾನತಿ ಮಾಡಿ ಸ್ಪೀಕರ್‌ ಆದೇಶ ಹೊರಡಿಸಿದ್ದಾರೆ.

ಅಚ್ಚೆಂನಾಯ್ಡು, ನಿಮ್ಮಲ, ಪಯ್ಯಾವುಲ, ಗೋರಂಟ್ಲ, ವೀರಾಂಜನೇಯಸ್ವಾಮಿ ಅಮಾನತುಗೊಂಡ ಶಾಸಕರು. ಅಮಾನತು ಆದೇಶ ಪ್ರಕಟಿಸುತ್ತಿದ್ದಂತೆ ಶಾಸಕರು ಆಕ್ರೋಶಭರಿತರಾದರು. ಈ ವೇಳೆ ಮಾರ್ಷಲ್‌ಗಳನ್ನು ಕರೆಸಿ, ಶಾಸಕರನ್ನು ಹೊರಗೆ ಕಳುಹಿಸಲಾಯಿತು.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಟಿಡಿಪಿ ಶಾಸಕರು ಗದ್ದಲ ಶುರು ಮಾಡಿದರು. ಪಶ್ಚಿಗೋದಾವರಿ ಜಿಲ್ಲೆ ಜಂಗಾರೆಡ್ಡಿಗುಡೆಂ ಮಿಸ್ಟರಿ ಮರಣಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು.

 

Share Post