National

ಭ್ರಷ್ಟರಿಗೆ ಸಿಂಹ ಸ್ವಪ್ನವಾದ ಆಪ್‌ ಸರ್ಕಾರ: ಲಂಚಕೋರರ ಬಗ್ಗುಬಡಿಯಲು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಕಟಣೆ..!

ಪಂಜಾಬ್:‌ ಪಂಜಾಬ್ ರಾಜ್ಯದಲ್ಲಿ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಆಪ್ ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. 117 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನಲ್ಲಿ, ಆಪ್ ಒಟ್ಟು 92 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ಪಕ್ಷವು ಈ ಹಿಂದೆ ಘೋಷಿಸಿದಂತೆ ಭಗವಂತ್ ಮಾನ್ ಅವರು ಸಿಎಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಮ್ಮ ಆಡಳಿತದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುವುದಾಗಿ ಜನರಿಗೆ ಹೇಳಿದ್ರು. ಇದೀಗ ನುಡಿದಂತೆ ನಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಕಚೇರಿಗಳಲ್ಲಿ ಸಿಎಂ ಫೋಟೋಗಳ ಬದಲಾಗಿ ಶಹೀದ್ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳು ಇರಬೇಕೆಂದು ತಿಳಿಸಿ ಎಲ್ಲರ ಗಮನ ಸೆಳೆದರು. ನವಜೋತ್ ಸಿಂಗ್ ಸಿಧು ಸೇರಿದಂತೆ 122 ಮಾಜಿ ಶಾಸಕರು ಭದ್ರತೆಯನ್ನು ತೆಗೆದುಹಾಕಲಾಗುತ್ತಿದೆ ಎಂದು ಪ್ರಮುಖ ಘೋಷಣೆ ಮಾಡಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಭ್ರಷ್ಟಾಚಾರದ ಕುರಿತು ಪ್ರಮುಖ ಹೇಳಿಕೆ ನೀಡಿದರು. ಭ್ರಷ್ಟಾಚಾರ ನಿಗ್ರಹಕ್ಕಾಗಿ ವಿಶೇಷ ಸಹಾಯವಾಣಿ ಆರಂಭಿಸಲಾಗುವುದು ಅದು ಮಾರ್ಚ್ 23 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯಂದು ‘ಭ್ರಷ್ಟಾಚಾರ ವಿರೋಧಿ ಸಹಾಯವಾಣಿ’ ಆರಂಭಿಸುವುದಾಗಿ ಘೋಷಿಸಿದ್ದರು ಅದರಂತೆ ಇಂದು ಸಹಾಯವಾಣಿ ಆರಂಭಿಸಿದ್ದಾರೆ.

ಅದರಂತೆ ಇಂದು ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆಯನ್ನು ಘೋಷಿಸಿದ್ರು. ʻ9501200200ʼ ನಂಬರಿಗೆ ದೂರು ದಾಖಲಿಸಬಹುದು ಎಂದು ಪಂಜಾಬ್ ಸರ್ಕಾರ ಪ್ರಕಟಿಸಿದೆ. ಬಂದಿರುವ ದೂರುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಯಾರಾದರೂ ಲಂಚ ಕೇಳಿದರೆ ಅದನ್ನು ವಿಡಿಯೋ ಮಾಡಿ ಕಳಿಸಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ನ್ಯಾಯಯುತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ಕೊನೆಗಾಣಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದೀಗ ಪಂಜಾಬ್ ಸರ್ಕಾರ ಘೋಷಿಸಿದ ಈ ಸಹಾಯವಾಣಿಗೆ ಜನರ ಪ್ರತಿಕ್ರಿಯೆ ಏನು? ಎಷ್ಟು ಭ್ರಷ್ಟ ಸಂಗತಿಗಳು ಬಯಲಾಗುತ್ತವೋ ಕಾದು ನೋಡಬೇಕಿದೆ.

Share Post