ಅನುಮತಿ ಇಲ್ಲದೆ ಅಮಿತಾಬ್ ಹೆಸರು, ಚಿತ್ರ ಬಳಸುವಂತಿಲ್ಲ; ಕೋರ್ಟ್
ನವದೆಹಲಿ; ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಹೆಸರು, ಭಾವಚಿತ್ರ ಹಾಗೂ ಧ್ವನಿಯನ್ನು ಅವರ ಒಪ್ಪಿಗೆ ಇಲ್ಲದೆ ಯಾರೂ ಬಳಸಬಾರದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೆಲವು ಸಂಸ್ಥೆಗಳು, ವ್ಯಕ್ತಿಗಳು ನನ್ನ ಅನುಮತಿ ಇಲ್ಲದೆ ಫೋಟೋ, ಹೆಸರು ಹಾಗೂ ಧ್ವನಿಯನ್ನು ಬಳಸುತ್ತಿದ್ದಾರೆ. ಇಂತಹವುಗಳಿಗೆ ನಿರ್ಬಂಧ ಹೇರಬೇಕೆಂದು ಅಮಿತಾಬ್ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿರುವ ಕೋರ್ಟ್ ಈ ಆದೇಶ ನೀಡಿದೆ.