National

ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಅಮರ್‌ ಜವಾನ್‌ ಜ್ಯೋತಿ ವಿಲೀನ

ದೆಹಲಿ: ಇಂಡಿಯಾ ಗೇಟ್‌ನಲ್ಲಿ ಅಮರ್‌ ಜವಾನ್‌ ಜ್ಯೋತಿಯನ್ನು ಇಂದು ರಾಷ್ಟ್ರೀಯ ಯುದ್ದ ಸ್ಮಾರಕ ಜ್ಯೋತಿಯೊಂದಿಗೆ ವಿಲೀನ ಮಾಡಲಾಯಿತು. 50ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಆಚರಣೆ ಇಂದು ಐತಿಹಾಸಿಕ ಬದಲಾವಣೆಯಾಗಿದೆ.  ದೇಶಕ್ಕಾಗಿ ಯುದ್ದಗಳಲ್ಲಿ ಮಡಿದ ವೀರಯೋಧರಿಗಾಗಿ ಗೌರವ ನಮನಗಳನ್ನು ಸೂಚಿಸಲು ಗಣರಾಜ್ಯೋತ್ಸವದ ದಿನ ಈ ಅಮರ್‌ ಜವಾನ್‌ ಜ್ಯೋತಿಗೆ ಮಾಲಾರ್ಪಣೆ ಮಾಡಲಾಗುತ್ತಿತ್ತು. ಉರಿಯುತ್ತಿರುವ ಜ್ವಾಲೆಯು ಯುದ್ದದಲ್ಲಿ ಮಡಿದ ಯೋಧರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಭಾವಿಸಲಾಗುತ್ತದೆ.  ಆದರೆ ಈ ವರ್ಷದಿಂದ ಅಮರ್‌ ಜವಾನ್‌ ಜ್ಯೋತಿಯನ್ನು ರಾಷ್ಟ್ರೀಯ ಯುದ್ದ ಸ್ಮಾರಕ ಜ್ಯೋತಿಯೊಂದಿಗೆ ವಿಲೀನ ಮಾಡಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷದಿಂದ ಟೀಕೆಗಳ ಸುರಿಮಳೆ ಹರಿದಿದೆ. ಇತಿಹಾಸವನ್ನು ಮರೆಮಾಚುವ ಸರ್ಕಾರದ ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ನಿಮ್ಮ ಈ ತೀರ್ಮಾನ ಯಾವುದೇ ಅಪರಾಧಗಳಿಗಿಂತ ಕಡಿಮೆಯೇನಲ್ಲ ಎಂದು ಆರೋಪ ಮಾಡಿದೆ.

ಆದರೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿ, ನಾವು ಅಮರರಾದ ಯೋಧರಿಗೆ ಹೆಚ್ಚಿನ ಗೌರವ ನೀಡುತ್ತಿದ್ದೇವೆ. ನಾವು ಈ ಜ್ಯೋತಿಯನ್ನು ಆರಿಸುವ ಕೆಲಸ ಮಾಡುತ್ತಿಲ್ಲ, ಬದಲಾಗಿ ಅಮರ ಸೈನಿಕರ ಜ್ಯೋತಿಯು ಯುದ್ದ ಸ್ಮಾರಕದಲ್ಲಿ ಉಜ್ವಲವಾಗಿ ಉರಿಯಲಿದೆ ಎಂದು ಹೇಳಿದ್ದಾರೆ. ಪ್ರತಿವರ್ಷ ದೇಶದ ಗಣ್ಯರು, ಸೇನಾಪಡೆ ಮುಖ್ಯಸ್ಥರು, ವಿದೇಶಿ ಅತಿಥಿಗಳು ಅಮರ್‌ ಜವಾನ್‌ ಜ್ಯೋತಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸುತ್ತಿದ್ದರು. ಆದರೆ ಕಳೆದ ವರ್ಷ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯುವರು ಯುದ್ದ ಸ್ಮಾರಕ ಜ್ಯೋತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಬದಲಾವಣೆ ತಂದಿದ್ದಾರೆ.

 

 

Share Post