ಆಗಲೇ I.N.D.I.A.ದಲ್ಲಿ ಅಪ್ವಸ್ವರ; ನಿತೀಶ್ ಕುಮಾರ್ ಆ ಹೆಸರು ಬೇಡ ಅಂದಿದ್ದೇಕೆ..?
ನವದೆಹಲಿ; ವಿಪಕ್ಷಗಳ ಮಹಾಮೈತ್ರಿ ಒಕ್ಕೂಟಕ್ಕೆ INDIA ಎಂದು ಹೆಸರಿಟ್ಟಿದ್ದಾರೆ. ಆದ್ರೆ ಇದಕ್ಕೆ ಒಕ್ಕೂಟದ ಭಾಗವಾಗಿರುವ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, INDIA ಇಂಡಿಯನ್ ನ್ಯಾಷನಲ್ ಡೆವೆಲಪ್‌ಮೆಂಟಲ್ ಇನ್‌ಕ್ಲ್ಯೂಸಿವ್ ಅಲಯನ್ಸ್ ಎಂಬ ಹೆಸರಿಗೆ ಎಲ್ಲಾ ಪಕ್ಷಗಳೂ ಒಮ್ಮತ ಸೂಚಿಸಿವೆ ಎಂದು ಹೇಳಿದ್ದರು. ಆದ್ರೆ ಇಂದು ಇದರ ಭಾಗವಾಗಿರುವ ನಿತೀಶ್ ಕುಮಾರ್ ಅವರು ಈ ಹೆಸರಿಗೆ ಅಪಸ್ವರ ಎತ್ತಿದ್ದಾರೆ.
ಈ ಬಗ್ಗೆ ಚರ್ಚೆ ಮಾಡದೆ INDIA ಎಂದು ಹೆಸರಿಡಲಾಗಿದೆ. INDIA ಹಾಗೂ ಬಿಜೆಪಿ ನೇತೃತ್ವದ NDA ಉಚ್ಛಾರಣೆ ಒಂದೇ ತರ ಇದೆ. ಹೀಗಾಗಿ INDIA ಹೆಸರಿಗೆ ನನ್ನ ಸಹಮತವಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ ಎನ್ನಲಾಗಿದೆ. ಅಂದಹಾಗೆ ರಾಹುಲ್ ಗಾಂಧಿಯವರು INDIA ಎಂಬ ಹೆಸರನ್ನು ಸೂಚಿಸಿದ್ದರು ಎನ್ನಲಾಗಿದೆ. ಅದನ್ನೇ ಅನೌನ್ಸ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ನಿತೀಶ್ ಕುಮಾರ್ ಆಕ್ಷೇಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಆರ್‌ಜೆಡಿ ಕೂಡಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.