HealthNational

ಕ್ರಾಂತಿಕಾರಿ ಗಾಯಕ ಗದ್ದರ್‌ ನಿಧನ; ಗಣ್ಯರ ಸಂತಾಪ

ಹೈದರಾಬಾದ್; ಕ್ರಾಂತಿಕಾರಿ ಹಾಡುಗಳ ಮೂಲಕ ದೊಡ್ಡ ಹೋರಾಟವನ್ನು ಸಂಘಟಿಸಿದ್ದ ತೆಲಂಗಾಣದ ಖ್ಯಾತ ಕ್ರಾಂತಿಕಾರಿ ಹೋರಾಟಗಾರ ಗದ್ದರ್‌ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರ ನಿಜವಾದ ಹೆಸರು ಗುಮ್ಮಡಿ ವಿಠಲ್‌ ರಾವ್. ಗದ್ದರ್‌ ಎಂದೇ ಖ್ಯಾತರಾಗಿದ್ದ ಅವರು, ಕ್ರಾಂತಿಗೀತೆಗಳನ್ನು ಮೂಲಕ ಜನರನ್ನು ಎಚ್ಚರಿಸುತ್ತಿದ್ದರು. ಸಾಮಾನ್ಯ ಜನರಿಗೆ ಅವರು ಹೋರಾಟಗಳನ್ನು ರೂಪಿಸುತ್ತಿದ್ದರು. ಕ್ರಾಂತಿಕಾರಿ ಹಾಡುಗಳ ಮೂಲಕವೇ ಕೋಟ್ಯಂತರ ಜನರನ್ನು ತಲುಪಿದ್ದ ಗದ್ದರ್‌ಗೆ ಎಪ್ಪತ್ತೇಳು ವರ್ಷ ವಯಸ್ಸಾಗಿತ್ತು.

ಗದ್ದರ್‌ ಅವರು ಕೆಲ ದಿನಗಳಿಂದ ಶ್ವಾಸಕೋಶ ಹಾಗೂ ಮೂತ್ರದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಸಂಜೆ ವಿಧಿವಶರಾಗಿದ್ದಾರೆ.

 

Share Post