National

ವಿದ್ಯುತ್‌ ಕಂಬಕ್ಕೆ ಸ್ಪೈಸ್‌ ಜೆಟ್‌ ವಿಮಾನ ಡಿಕ್ಕಿ; ಕೆಲಕಾಲ ಆತಂಕ

ನವದೆಹಲಿ: ಪ್ರಯಾಣಿಕರಿದ್ದ ಸ್ಪೈಸ್‌ಜೆಟ್‌ ವಿಮಾನ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪುಶ್‌ಬ್ಯಾಕ್‌ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಪೈಸ್‌ ಜೆಟ್‌ನ ಎಸ್‌ಜಿ–160 ನಂಬರ್‌ನ ವಿಮಾನ ದೆಹಲಿಯಿಂದ ಜಮ್ಮುಗೆ ತೆರಳಲು ಸಿದ್ಧವಾಗಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ.

ಪ್ರಯಾಣಿಕರು ಕುಳಿತಾದ ಮೇಲೆ ಪ್ಯಾಸೆಂಜರ್‌ ಟರ್ಮಿನಲ್‌ನಿಂದ ರನ್‌ವೇ ಕಡೆಗೆ ವಿಮಾನ ತೆರಳುತ್ತಿತ್ತು. ಈ ವೇಳೆ ಅದು ವಿದ್ಯುತ್‌ ಕಂಬಕ್ಕೆ ಡಿಕ್ಕೆ ಹೊಡೆದಿದೆ. ಆದ್ರೆ ಘಟನೆಯಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಕೂಡಲೇ ಪ್ರಯಾಣಿಕರನ್ನು ಬೇರೊಂದು ಏರ್‌ಕ್ರಾಫ್ಟ್‌ ಮೂಲಕ ಜಮ್ಮುಗೆ ಕಳುಹಿಸಲಾಯಿತು. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.

 

Share Post