ಸೇನಾ ಹೆಲಿಕಾಪ್ಟರ್ ದುರಂತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ವೆಲಿಂಗ್ಟನ್: ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿದೆ. ಘಟನಾ ಸ್ಥಳದಲ್ಲಿ ಎಂಟು ಮೃತದೇಹಗಳು ಪತ್ತೆಯಾಗಿದೆ. ಆದರೆ ಮೃತದೇಹಗಳನ್ನು ಗುರುತು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಸುಟ್ಟುಹೋಗಿವೆ.
ದುರಂತದ ನಂತರ ಬಿಪಿನ್ ರಾವತ್ ಸೇರಿ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೂನೂರಿನ ಎಸ್ಟೇಟ್ ಒಂದರಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ ಎಂದು ತಿಳಿದುಬಂದಿದೆ. ಪಶ್ಚಿಮ ಘಟ್ಟಗಳು ಆರಂಭವಾಗುವ ಪ್ರದೇಶದಲ್ಲಿ ಈ ದುರಂತದ ಸಂಭವಿಸಿದ್ದು, ಮನೆಗಳು ಇರುವ ಬೆಟ್ಟದ ರಸ್ತೆಯಲ್ಲಿಯೇ ಸೇನಾ ಹೆಲಿಕಾಪ್ಟನ್ ಪತನವಾಗಿದೆ. ಈ ಕಾರಣದಿಂದಾಗಿಯೇ ಸ್ಥಳೀಯರು ಬಹುಬೇಗ ನೆರವಿಗೆ ಧಾವಿಸಿದ್ದಾರೆ. ಮೂವರನ್ನು ರಕ್ಷಣೆ ಮಾಡಿದ್ದಾರೆ.